ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಕೃಷ್ಣಾ‌ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರ ಶವಗಳನ್ನ ಇಂದು ಎನ್​ಡಿಆರ್​​ಎಫ್ ತಂಡ ಹೊರತೆಗೆದಿದೆ. ನಿನ್ನೆ ಒಂದು‌ ಶವ ಪತ್ತೆಯಾಗಿತ್ತು. ಇಂದು ಮತ್ತೆ ಮೂರು ಜನರ ಶವ ಪತ್ತೆಯಾಗಿದೆ.

ಕಳೆದ ಸೋಮವಾರ ನದಿಯಲ್ಲಿ ಒಂದೇ ಕುಟುಂಬದ ನಾಲ್ಕು ಜನ ಅಣ್ಣ ತಮ್ಮಂದಿರು ನೀರು ಪಾಲಾಗಿದ್ದರು. ಜಿಲ್ಲಾಡಳಿತದ ಸತತ ಪ್ರಯತ್ನದಿಂದ ಮಂಗಳವಾರದಂದು ಪರಶುರಾಮ ಬನಸೋಡೆ ಎಂಬವರ ಶವ ಪತ್ತೆಯಾಗಿತ್ತು. ಮೂರನೇ ದಿನವಾದ ಇಂದು ನೀರಿನಲ್ಲಿ ಪರಸಪ್ಪ ಬನಸೋಡೆ, ಶಂಕರ ಬನಸೋಡೆ ಹಾಗೂ ಧರೆಪ್ಪ ಬನಸೋಡೆ ಅವರ ಶವಗಳು ತೇಲಿಬಂದಿವೆ.

ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶವ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

The post ಕೃಷ್ಣಾ ನದಿಯಲ್ಲಿ ಕೊಚ್ಚಿಹೋಗಿದ್ದ ನಾಲ್ವರು ಸಹೋದರರ ಶವ ಪತ್ತೆ appeared first on News First Kannada.

Source: newsfirstlive.com

Source link