ಕೆಂಗೇರಿ ನೈಸ್ ರೋಡ್ ಜಂಕ್ಷನ್​ ರಸ್ತೆ: 3 ದಿನದಲ್ಲಿ ಗುಂಡಿ ಮುಚ್ಚುವ ಭರವಸೆ ಕೊಟ್ಟ ಬಿಬಿಎಂಪಿ | Kengeri Nice Road Pothole Problem BBMP Chief Engineer Assures to Fill Pothole within 3 days


ಕೆಂಗೇರಿ ನೈಸ್ ರೋಡ್ ಜಂಕ್ಷನ್​ ರಸ್ತೆ: 3 ದಿನದಲ್ಲಿ ಗುಂಡಿ ಮುಚ್ಚುವ ಭರವಸೆ ಕೊಟ್ಟ ಬಿಬಿಎಂಪಿ

ನೈಸ್ ರಸ್ತೆ ಜಂಕ್ಷನ್​ ಬಳಿ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಬೆಂಗಳೂರು ಮೆಟ್ರೋ ನಿಗಮಕ್ಕೆ (ಬಿಎಂಆರ್​ಸಿಎಲ್) ಕಾಮಗಾರಿ ನಿರ್ವಹಿಸಲು ರಸ್ತೆಯನ್ನು ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದರು.

ಬೆಂಗಳೂರು: ನಗರದ ಕೆಂಗೇರಿ ನೈಸ್​ ರೋಡ್​ ಜಂಕ್ಷನ್​ನಲ್ಲಿ (Nice Road Junction) ಇನ್ನು ಮೂರು ದಿನಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಭರವಸೆ ನೀಡಿದ್ದಾರೆ. ಬೆಂಗಳೂರು ಮೆಟ್ರೋ ನಿಗಮಕ್ಕೆ (ಬಿಎಂಆರ್​ಸಿಎಲ್) ಕಾಮಗಾರಿ ನಿರ್ವಹಿಸಲು ರಸ್ತೆಯನ್ನು ಬಿಟ್ಟುಕೊಟ್ಟಿದ್ದೇವೆ. ಅವರು ನಿರ್ವಹಿಸುತ್ತಿದ್ದ ಪೂರ್ವಭಾವಿ ಕಾಮಗಾರಿಯು ಇದೀಗ ಕೊನೆಯ ಹಂತಕ್ಕೆ ಬಂದಿದೆ. ಅಲ್ಲಿನ ಕಾಮಗಾರಿಗಳಿಂದಾಗಿ ರಸ್ತೆಯಲ್ಲಿ ಗುಂಡಿಗಳಾಗಿವೆ. ಮೂರು ದಿನಗಳಲ್ಲಿ ಗುಂಡಿ ಮುಚ್ಚಲು ಕ್ರಮಕೈಗೊಳ್ಳುತ್ತೇವೆ. ಸವಾರರಿಗೆ ತೊಂದರೆಯಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದರು.

ರಸ್ತೆ ಗುಂಡಿಗಳ ಬಗ್ಗೆ ನಾಯಂಡಹಳ್ಳಿ, ಜ್ಞಾನಭಾರತಿಯವರೆಗೂ ಈ ಹಿಂದೆ ಸಮೀಕ್ಷೆ ಮಾಡಿದ್ದೆವು. ನೈಸ್ ರಸ್ತೆ ಹಾಗೂ ಬಿಎಂಆರ್​ಸಿಎಲ್ ನಡುವೆ ಸಮನ್ವಯ ಸಾಧಿಸಿ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ. ರಸ್ತೆಯ ಮೇಲೆ ಬೀಳುವ ಮಳೆಯ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸುತ್ತೇವೆ ಎಂದು ತಿಳಿಸಿದರು.

ಸಾವಿರದ ಲೆಕ್ಕದಲ್ಲಿ ರಸ್ತೆ ಗುಂಡಿ ಲೆಕ್ಕ ಕೊಟ್ಟ ಬಿಬಿಎಂಪಿ ಹೊಸ ಕಮಿಷ​ನರ್

ಬಿಬಿಎಂಪಿಗೆ ಕಮಿಷನರ್​ ಆಗಿ ಹೊಸದಾಗಿ ಯಾರೇ ಬರಲಿ, ಅವರು ಹೇಳುವ ಮೊದಲ ಮಾತು ಮಳೆ ಮತ್ತು ಗುಂಡಿ. ಹೊಸ ಕಮಿಷ​ನರ್​ ತುಷಾರ್ ಅವರೂ ಲೆಕ್ಕ ಹಾಕಿದವರಂತೆ ಬೆಂಗಳೂರಿನಲ್ಲಿ ಬರೋಬ್ಬರಿ 10,000 ಗುಂಡಿಗಳಿವೆ ಎಂದು ಹೇಳಿದ್ದಾರೆ. ‘ಬನ್ನೀ ಸಾ ಸಾವಿರ ಅಲ್ಲ; ಲಕ್ಷಗಳ ಲೆಕ್ಕದಲ್ಲಿ ಗುಂಡಿಗಳನ್ನು ತೋರಿಸುತ್ತೇವೆ’ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದರು. ಮಳೆಗಾಲ ಹತ್ತಿರಕ್ಕೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗುಂಡಿಗಳ ಗಲಾಟೆ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಚರ್ಚೆಯೂ ನಡೆದಿತ್ತು.

TV9 Kannada


Leave a Reply

Your email address will not be published.