ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಂದು ಸಿದ್ದರಾಮಯ್ಯರನ್ನು ಭೇಟಿಯಾದರು | Members of contractors’ association led by their president Kempanna meet Siddaramaiah todayಸಿದ್ದರಾಮಯ್ಯನವರ ಅಧಿಕೃತ ನಿವಾಸದಲಿ ನಡೆದ ಮಾತುಕತೆಯಲ್ಲಿ ಏನೆಲ್ಲ ಚರ್ಚಿಸಲಾಯಿತು ಅನ್ನೋದು ಇನ್ನೂ ಬೆಳಕಿಗೆ ಬಂದಿಲ್ಲವಾದರೂ ಭೇಟಿ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.

TV9kannada Web Team


| Edited By: Arun Belly

Aug 24, 2022 | 1:34 PM
ಬೆಂಗಳೂರು: ಗುತ್ತಿಗೆದಾರರು ತಾವು ನಡೆಸಿದ ಕಾಮಗಾರಿಗಳ (works) ಬಿಲ್ ಗಳನ್ನು ಕ್ಲೀಯರ್ ಮಾಡಿಸಿಕೊಳ್ಳಲು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮತ್ತಯ ಮಧ್ಯವರ್ತಿಗಳಿಗೆ ಶೇಕಡಾ 40 ರಷ್ಟು ಲಂಚ (ಕಮೀಷನ್) ನೀಡುತ್ತಿರುವುದು ನಿಜ ಎಂದು ಹೇಳಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರು ಬುಧವಾರದಂದು ಸಂಘದ ಸುಮಾರು 30 ಪದಾಧಿಕಾರಿಗಳೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ಭೇಟಿಮಾಡಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯನವರ ಅಧಿಕೃತ ನಿವಾಸದಲಿ ನಡೆದ ಮಾತುಕತೆಯಲ್ಲಿ ಏನೆಲ್ಲ ಚರ್ಚಿಸಲಾಯಿತು ಅನ್ನೋದು ಇನ್ನೂ ಬೆಳಕಿಗೆ ಬಂದಿಲ್ಲವಾದರೂ ಭೇಟಿ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.


TV9 Kannada


Leave a Reply

Your email address will not be published.