ನವದೆಹಲಿ: ದೆಹಲಿಯಲ್ಲಿ ಜನವರಿ 26 ಅಂದ್ರೆ ಗಣರಾಜ್ಯೋತ್ಸವ ದಿನದಂದು ನಡೆದಿದ್ದ ಹಿಂಸಾಚಾರ ಪ್ರಕರಣ ಸಂಬಂಧ ನಟ ದೀಪ್​ ಸಿಧುಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರೋಪಿ ದೀಪ್​ ಸಿಧು ಈಗಾಗಲೇ 14 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಟ್ಟಿದ್ದರು. ಅಲ್ಲದೇ ದೀಪ್​ ಸಿಧು ಸುಮಾರು 70 ದಿನಗಳ ಕಾಲ ಬಂಧನದಲ್ಲಿರೋದನ್ನ ನ್ಯಾಯಾಲಯ ಗಮನಿಸಿತ್ತು. ಸದ್ಯ ಜಾಮೀನು ನೀಡುವಾಗ ಈ ಎಲ್ಲಾ ವಿಚಾರಗಳನ್ನು ಗಮನಿಸಿ ದೀಪ್​ ಸಿಧುಗೆ ಜಾಮೀನು ನೀಡಲಾಗಿದೆ ಅಂತಾ ದೆಹಲಿ ನ್ಯಾಯಾಲಯ ತಿಳಿಸಿದೆ.

ಏಪ್ರಿಲ್ 17 ರಂದು ಒಂದು ಪ್ರಕರಣದಲ್ಲಿ ದೀಪ್ ಸಿಧುಗೆ ಜಾಮೀನು ಸಿಕ್ಕಿತ್ತಾದ್ರೂ ಜಾಮೀನು ಸಿಕ್ಕ ಕೆಲವೇ ಗಂಟೆಗಳಲ್ಲಿ ಅವರನ್ನ ದೆಹಲಿ ಪೊಲೀಸರು ಮತ್ತೆ ಬಂಧಿಸಿದ್ದರು.

ಇದನ್ನೂ ಓದಿ: ಕೆಂಪುಕೋಟೆ ಪ್ರಕರಣ: ಜಾಮೀನು ಸಿಕ್ಕ ಕೆಲವೇ ಗಂಟೆಗಳಲ್ಲಿ ಮತ್ತೆ ಬಂಧನಕ್ಕೊಳಗಾದ ನಟ ದೀಪ್ ಸಿಧು

The post ಕೆಂಪುಕೋಟೆ ಗಲಾಟೆ: ನಟ ದೀಪ್ ಸಿಧುಗೆ ಜಾಮೀನು ಮಂಜೂರು ಮಾಡಿದ ದೆಹಲಿ ಕೋರ್ಟ್​ appeared first on News First Kannada.

Source: News First Kannada
Read More