ಕೆಆರ್​ಎಸ್​ನಲ್ಲಿ ಅಕ್ರಮ ಗಣಿಗಾರಿಕೆ ನಡಿತಿದ್ರೆ ತಕ್ಷಣವೇ ನಿಲ್ಲಿಸಬೇಕು: ರಾಜವಂಶಸ್ಥ ಯದುವೀರ್

ಕೆಆರ್​ಎಸ್​ನಲ್ಲಿ ಅಕ್ರಮ ಗಣಿಗಾರಿಕೆ ನಡಿತಿದ್ರೆ ತಕ್ಷಣವೇ ನಿಲ್ಲಿಸಬೇಕು: ರಾಜವಂಶಸ್ಥ ಯದುವೀರ್

ಚಾಮರಾಜನಗರ: ಕೆಆರ್​ಎಸ್​ ಅಣೆಕಟ್ಟು ಬಿರುಕು ವಿಚಾರ ಕುರಿತು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದ್ದಾರೆ.

ಕೆಆರ್​ಎಸ್​ ಬಿರುಕು ವಿಚಾರ ಕುರಿತು ನಮಗೆ ಇತ್ತೀಚೆಗಷ್ಟೆ ಮಾದ್ಯಮಗಳಿಂದ ಮಾತ್ರ ಗೊತ್ತಾಗಿದ್ದು ಸರ್ಕಾರದಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದಿದ್ದಾರೆ. ಇನ್ನು ಅಣೆಕಟ್ಟು ಸುತ್ತಮುತ್ತ ಅಕ್ರಮ ಗಣಿಗಾರಿಕೆ ಎನಾದ್ರು ನಡೆದಿದ್ದರೆ ಸರ್ಕಾರ ಅದನ್ನು ಗಮನಿಸಿ ಈ ಬಗ್ಗೆ ತನಿಖೆ ನಡೆಸಿ ಅಕ್ರಮ ಗಣಿಗಾರಿಕೆ ಇದ್ರೆ ತಕ್ಷಣವೇ ನಿಲ್ಲಿಸಬೇಕು ಎಂದಿದ್ದಾರೆ. ಈ ವಿಚಾರವಾಗಿ ಕೆಆರ್​ಎಸ್​ನ ಎಕ್ಸ್​ಪರ್ಟ್​ ಪ್ಯಾನಲ್ ಯಾವ ನಿರ್ಧಾರ ಕೈಗೊಳ್ಳುತ್ತೆ ನೋಡೋಣ ಎಂದು ಹೇಳಿದ್ದಾರೆ.

ಕೆಆರ್​ಎಸ್​ ಬಹಳಷ್ಟು ವಷರ್ಗಳಿಂದಲೂ ಆಸರೆಯಾಗಿದ್ದು ಅದು ಹೀಗೆ ಮುಂದೆಯೂ ಉಪಯೋಗವಾಗಲಿ ಈ ನಿಟ್ಟಿನಲ್ಲಿ ಕೆಆರ್​ಎಸ್ ನಲ್ಲಿ ಇರುವ ಸಮಸ್ಯೆಗಳಿಗೆ  ಪರಿಹಾರವಾಗಿ ಸರ್ಕಾರ ಆದಷ್ಟು ಬೇಗ ಒಳ್ಳೇಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

The post ಕೆಆರ್​ಎಸ್​ನಲ್ಲಿ ಅಕ್ರಮ ಗಣಿಗಾರಿಕೆ ನಡಿತಿದ್ರೆ ತಕ್ಷಣವೇ ನಿಲ್ಲಿಸಬೇಕು: ರಾಜವಂಶಸ್ಥ ಯದುವೀರ್ appeared first on News First Kannada.

Source: newsfirstlive.com

Source link