‘ಕೆಆರ್​ಎಸ್​ ಡ್ಯಾಂ ಉಳಿಸಿ’ ಕೇಂದ್ರ ಸಚಿವರಿಗೆ ಸಂಸದೆ ಸುಮಲತಾ ಮನವಿ

‘ಕೆಆರ್​ಎಸ್​ ಡ್ಯಾಂ ಉಳಿಸಿ’ ಕೇಂದ್ರ ಸಚಿವರಿಗೆ ಸಂಸದೆ ಸುಮಲತಾ ಮನವಿ

ನವದೆಹಲಿ: ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ಗೆ​​ ತೊಂದರೆಯಾಗುತ್ತಿದೆ ಎಂಬ ವಿಚಾರವನ್ನು ಕೇಂದ್ರದ ಗಮನಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ತಂದಿದ್ದಾರೆ. ಇಂದು ಕೇಂದ್ರ ಜಲಶಕ್ತಿ ಮಂತ್ರಿಗಳಾದ ಗಜೇಂದ್ರ ಸಿಂಗ್ ಶೇಖಾವತ್​​ರನ್ನು ಭೇಟಿಯಾಗಿ.. ಕೆಆರ್​ಎಸ್​ ಅಣೆಕಟ್ಟು ಸುತ್ತ 15 ಕಿಲೋ ಮೀಟರ್ ವ್ಯಾಪ್ತಿಯೊಳಗೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಬ್ರೇಕ್​​ ಹಾಕಿ ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಸುಮಲತಾ ಅಂಬರೀಶ್​​.. ಇಂದು ಕೇಂದ್ರ ಜಲಶಕ್ತಿ ಮಂತ್ರಿಗಳಾದ ಗಜೇಂದ್ರ ಸಿಂಗ್ ಶೇಖಾವತ್​​ರನ್ನು ಭೇಟಿ ಮಾಡಿದೆ. ಭೇಟಿಯಾಗಿ ಕೆ.ಆರ್.ಎಸ್ ಅಣೆಕಟ್ಟೆಗೆ ಅಕ್ರಮ ಗಣಿಗಾರಿಕೆಯಿಂದ ಬಂದೊದಗಿರುವ ಅಪಾಯವನ್ನು ಅವರ ಗಮನಕ್ಕೆ ತಂದಿದ್ದೇನೆ. ಈ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ ಎಂದು ಬರೆದುಕೊಂಡಿದ್ದಾರೆ.

The post ‘ಕೆಆರ್​ಎಸ್​ ಡ್ಯಾಂ ಉಳಿಸಿ’ ಕೇಂದ್ರ ಸಚಿವರಿಗೆ ಸಂಸದೆ ಸುಮಲತಾ ಮನವಿ appeared first on News First Kannada.

Source: newsfirstlive.com

Source link