ಕೆಎಸ್​ಆರ್​ಟಿಸಿ ಎಡವಟ್ಟು: ಕರ್ನಾಟಕ ಬಸ್​ ಟಿಕೆಟ್​ನಲ್ಲಿ ಜೈ ಮಹಾರಾಷ್ಟ್ರ ಎಂದು ಮುದ್ರಣ | KSRTC logo mistake jai maharashtra logo printed in karnataka bus ticket gadagಟಿಕೆಟ್ ಮಧ್ಯಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ ಅಂತಾ ಪ್ರಿಂಟ್ ಮಾಡಲಾಗಿದ್ದು ಒಂದು ಕ್ಷಣ ಟಿಕೆಟ್ ನೋಡಿ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ.

TV9kannada Web Team


| Edited By: Ayesha Banu

Oct 05, 2022 | 3:05 PM
ಗದಗ: ಜಿಲ್ಲೆಯಲ್ಲಿ ಕೆಎಸ್ಆರ್​ಟಿಸಿ ಮಹಾ ಯಡವಟ್ಟು ಮಾಡಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ನಲ್ಲಿ ಜೈ ಮಹಾರಾಷ್ಟ್ರ, ಮಹಾರಾಷ್ಟ್ರ ರಾಜ್ಯ ಪರಿವಾಹನ ಎಂದು ಮುದ್ರಿಸಲಾಗಿದ್ದು ಮಹಾರಾಷ್ಟ್ರ ಪ್ರೀತಿಗೆ ಜನ ಆಕ್ರೋಶ ಹೊರ ಹಾಕಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಬಸ್ಸಿನ ಟಿಕೆಟ್ ಮೇಲೆ ವಾ. ಕ. ರ. ಸಾ‌ ಸಂಸ್ಥೆ ಗದಗ ಘಟಕ ಅಂತಾ ಮುದ್ರಿಸಲಾಗಿದೆ.

ಟಿಕೆಟ್ ಮಧ್ಯಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ ಅಂತಾ ಪ್ರಿಂಟ್ ಮಾಡಲಾಗಿದ್ದು ಒಂದು ಕ್ಷಣ ಟಿಕೆಟ್ ನೋಡಿ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ.ಇದೇನು ಮಹಾರಾಷ್ಟ್ರ ವೋ ಕರ್ನಾಟಕವೋ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

TV9 Kannada


Leave a Reply

Your email address will not be published.