ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆ ಇನ್ಮುಂದೆ ‘ಕೆಎಸ್​ಆರ್​​ಟಿಸಿ’ ಪದ ಬಳಸುವಂತಿಲ್ಲ ಎಂದು ಕೇಂದ್ರೀಯ ಟ್ರೇಡ್ ಮಾರ್ಕ್ಸ್​ ರಿಜಿಸ್ಟ್ರಿ ಆದೇಶ ಹೊರಡಿಸಿದೆ. ಈ ಮೂಲಕ 27 ವರ್ಷಗಳ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಹಿನ್ನಡೆಯಾದಂತಾಗಿದೆ.

ಕೇರಳ ಹಾಗೂ ಕರ್ನಾಟಕ ನಡುವೆ ನಡೆಯುತ್ತಿದ್ದ ಟ್ರೇಡ್ ಮಾರ್ಕ್ಸ್​ ಗಲಾಟೆಗೆ ಅಂತ್ಯ ಹಾಡಲು ಕೇಂದ್ರೀಯ ಟ್ರೇಡ್​​ ಮಾರ್ಕ್ಸ್​ ರಿಜಿಸ್ಟ್ರಿ ಈ ಆದೇಶ ಹೊರಡಿಸಿದೆ. 27 ವರ್ಷಗಳ ನಂತರ ಕರ್ನಾಟಕ ವಿರುದ್ಧ ಕೇರಳಕ್ಕೆ ಜಯ ಸಿಕ್ಕಂತಾಗಿದೆ.

1965 ರಿಂದಲೂ ಕೇರಳದಲ್ಲಿ ಕೆಎಸ್​​ಆರ್​​ಟಿಸಿ ಪದ ಎಂದು ಬಳಕೆಯಲ್ಲಿದೆ. 1973ರಿಂದ ಕರ್ನಾಟಕದಲ್ಲಿ ಕೆಎಸ್​​ಆರ್​ಟಿಸಿ ಪದ ಬಳಕೆ ಮಾಡಲಾಗಿತ್ತು. 2014ರಲ್ಲಿ ಕರ್ನಾಟಕದಲ್ಲಿ ಕೆಎಸ್​​ಆರ್​​ಟಿಸಿ ಪದ ವಾಣಿಜ್ಯ ​ನೋಂದಣಿಯಾಗಿತ್ತು. ಕೆಎಸ್​​ಆರ್​​ಟಿಸಿ ಎಂಬ ಪದ ಮೊದಲಿಗೆ ಬಳಸಿದ್ದು ಕೇರಳ. ಕರ್ನಾಟಕದಲ್ಲಿ ಕೆಎಸ್​​ಆರ್​​ಟಿಸಿ ಲೋಗೋ ಮತ್ತು ಹೆಸರನ್ನ ಬಳಸಬಾರದು ಎಂದು ಕೇರಳ ಆಗ್ರಹಿಸುತ್ತ ಬಂದಿತ್ತು.

ಇದೀಗ 27 ವರ್ಷಗಳ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಹಿನ್ನೆಡೆಯಾಗಿದೆ. KSRTC ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಾರ್ ಕೇರಳದ ಪರವಾಗಿ ತೀರ್ಪು ನೀಡಿದೆ. ಕರ್ನಾಟಕ ಮತ್ತು ಕೇರಳ ಎರಡು ರಾಜ್ಯಗಳು ಬಸ್ ಸಾರಿಗೆಯಲ್ಲಿ ಕೆಎಸ್​ಆರ್​​ಟಿಸಿ ಎಂದೇ ಪದ ಬಳಸುತ್ತಿದ್ದವು. ಈ ಬಗ್ಗೆ ತೀರ್ಪು ಬಂದಿದ್ದು ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಆ್ಯಕ್ಟ್ ಅಡಿಯಲ್ಲಿ ಕೇರಳಕ್ಕೆ ರೈಟ್ಸ್ ಸಿಕ್ಕಿದೆ. ಇನ್ಮುಂದೆ ರಾಜ್ಯ ಸಾರಿಗೆಗೆ KSRTC ಎಂದು ಬಳಸುವ ಹಾಗಿಲ್ಲ. ಕರ್ನಾಟಕದ ಬಸ್‌ಗಳಲ್ಲಿ ಬ್ರಾಂಡ್ ಹೆಸರು ಬಳಸುವುದನ್ನು ನಿಲ್ಲಿಸುವಂತೆ ಕೋರಿ ಕರ್ನಾಟಕ ಸಾರಿಗೆ ನಿಗಮಕ್ಕೆ ನೋಟಿಸ್ ನೀಡಲಾಗುವುದು ಎಂದು ಕೇರಳದ ಅಧಿಕಾರಿಗಳು ತಿಳಿಸಿದ್ದಾರೆ.

The post ‘ಕೆಎಸ್​​ಆರ್​​ಟಿಸಿ’ಗಾಗಿ ಕೇರಳ VS ಕರ್ನಾಟಕ: 27 ವರ್ಷಗಳ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಹಿನ್ನಡೆ appeared first on News First Kannada.

Source: newsfirstlive.com

Source link