ಕೆಕೆಆರ್​ ಪ್ಲೇ ಆಫ್​ ಕನಸು ಬಹುತೇಕ ನನಸು.. ಹೇಗಿತ್ತು ಗೆಲುವಿನ ಹೋರಾಟ?

ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್​ ಸೋತ ಕೆಕೆಆರ್​ ಮೊದಲು ಬ್ಯಾಟಿಂಗ್​ ನಡೆಸಿತು. ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​​, ಶುಭಮನ್​ಗಿಲ್​ ಸಾಲಿಡ್​ ಓಪನಿಂಗ್​ ನೀಡಿದ್ರು. ಈ ಜೋಡಿ ಮೊದಲ ವಿಕೆಟ್​ಗೆ 79 ರನ್​ಗಳ ಕಾಣಿಕೆ ನೀಡಿ ಭದ್ರ ಬುನಾದಿ ಹಾಕಿತು. ಉತ್ತಮ ಇನ್ನಿಂಗ್ಸ್​ ಕಟ್ಟಿದ ವೆಂಕಟೇಶ್​ ಅಯ್ಯರ್​ 38 ರನ್​ಗಳಿಸಿ ಔಟಾದ್ರೆ, ಶುಭ್​ಮನ್​ಗಿಲ್​ ಅರ್ಧಶತಕ ಪೂರೈಸಿದ್ರು.

ಅಯ್ಯರ್​ ಪತನದ ಬಳಿಕ ಕಣಕ್ಕಿಳಿದ ನಿತೀಶ್​ ರಾಣಾ 12 ರನ್​ಗಳಿಸಿ ಔಟಾದ್ರೆ, ಗಿಲ್​ ಆಟ 56 ರನ್​ಗಳಿಗೆ ಅಂತ್ಯವಾಯ್ತು. ರಾಹುಲ್​ ತ್ರಿಪಾಠಿ 21 ರನ್​ಗಳ ಕಾಣಿಕೆ ನೀಡಿದ್ರು. ಅಂತಿಮ ಹಂತದಲ್ಲಿ ರಾಜಸ್ಥಾನ ಬೌಲರ್​​ಗಳು ಬಿಗಿ ಬೌಲಿಂಗ್​ ಸಂಘಟಿಸಿದ್ರು. ಪರಿಣಾಮ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ಕೆಕೆಆರ್​​ 171 ರನ್​ಗಳಿಸಿತು. ದಿನೇಶ್​ ಕಾರ್ತಿಕ್​, ಇಯಾನ್​ ಮಾರ್ಗನ್​ ಅಜೇಯರಾಗುಳಿದರು.

ಬ್ಯಾಟಿಂಗ್​ ಮಾತ್ರವಲ್ಲ..! ಬೌಲಿಂಗ್​ನಲ್ಲೂ ಕೆಕೆಆರ್​ ಪಡೆ ಪಾರಮ್ಯ ಮೆರೆಯಿತು. ಕೊಲ್ಕತ್ತಾ ಬೌಲರ್​ಗಳ ಕರಾರುವಕ್​ ದಾಳಿಯ ಮುಂದೆ ಮಂಕಾದ ರಾಜಸ್ಥಾನ ರಾಯಲ್ಸ್​ ಪಡೆ ಪೆವಿಲಿಯನ್​ ಪರೇಡ್​ ನಡೆಸಿತು. ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​, ಲಯಾಮ್​ ಲಿವಿಂಗ್​ ಸ್ಟೋನ್​, ಅನುಜ್​ ರಾವತ್​ ಹಾಗೂ ಗ್ಲೇನ್​ ಫಿಲಿಪ್ಸ್​​ ಬಂದಷ್ಟೇ ವೇಗವಾಗಿ ಡಗೌಟ್​​ ಸೇರಿದ್ರು.

ಉಳಿದೆಲ್ಲ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿದ್ರೆ, ಶಿವಂ​ ದುಬೆ ಹಾಗೂ ರಾಹುಲ್​ ತೆವಾಟಿಯಾ ಇಬ್ಬರು ಹೋರಾಟ ನಡೆಸಿದ್ರು. ಆದ್ರೆ, ಈ ಇಬ್ಬರ ಆಟಕ್ಕೆ ಬ್ರೇಕ್​ ಹಾಕಿದ ಶಿವಮ್​ ಮಾವಿ ಕೆಕೆಆರ್​ಗೆ ಯಶಸ್ಸು ತಂದು ಕೊಟ್ಟರು. ಆ ಬಳಿಕ ಕಣಕ್ಕಿಳಿದ ರಾಜಸ್ಥಾನದ ಆಟಗಾರರ್ಯಾರು ಹೋರಾಟವನ್ನೇ ನಡೆಸಲಿಲ್ಲ. ಪರಿಣಾಮ ಕೇವಲ 85 ರನ್​ಗಳಿಗೆ ಸಂಜು ಪಡೆ ಆಲೌಟ್​ ಆಯ್ತು. 86 ಭಾರಿ ಅಂತರದ ಜಯ ಸಾಧಿಸಿದ ಕೆಕೆಆರ್​​ ರನ್​ರೇಟ್​ ಹೆಚ್ಚಿಸಿಕೊಳ್ಳೋದ್ರೊಂದಿಗೆ ಪ್ಲೇ ಆಫ್ ಎಂಟ್ರಿಯನ್ನ ಬಹುತೇಕ ಖಚಿತಪಡಿಸಿಕೊಂಡಿತು.

News First Live Kannada

Leave a comment

Your email address will not be published. Required fields are marked *