ಚೆನ್ನೈ: ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಶರಣಾದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರವಿವಾರವಷ್ಟೇ ಹೈದರಾಬಾದ್‌ಗೆ ಸೋಲುಣಿಸಿ “ಗೆಲುವಿನ ಶತಕ’ ಬಾರಿಸಿದ ಕೋಲ್ಕತಾ ನೈಟ್‌ರೈಡರ್ ಮಂಗಳವಾರ ಪರಸ್ಪರ ಮುಖಾಮುಖೀಯಾಗಲಿವೆ.

ಕೆಕೆಆರ್‌ ತಂಡದ ಮುಂಬೈ ಎದುರಿನ ದಾಖಲೆ ಅತ್ಯಂತ ಕಳಪೆ ಎಂಬುದಕ್ಕೆ ಇತಿಹಾಸ ಸಾಕ್ಷಿ ಒದಗಿ ಸುತ್ತದೆ. ಮುಂಬೈ ವಿರುದ್ಧ ಆಡಿದ 27 ಪಂದ್ಯಗಳಲ್ಲಿ ಕೆಕೆಆರ್‌ಗೆ ಗೆಲ್ಲಲು ಸಾಧ್ಯವಾದದ್ದು ಆರರಲ್ಲಿ ಮಾತ್ರ. ಕಳೆದ ಯುಎಇ ಕೂಟದ ಎರಡೂ ಪಂದ್ಯಗಳಲ್ಲಿ ಕೋಲ್ಕತಾ ಮುಂಬೈಗೆ ಶರಣಾಗಿತ್ತು.

ಸೇಡಿಗೆ ಕಾದಿದೆ ಕೆಕೆಆರ್‌
ಈ ಸೋಲುಗಳಿಗೆ ಸೇಡು ತೀರಿಸಲು ಮಾರ್ಗನ್‌ ಪಡೆಯೀಗ ಹವಣಿಸುತ್ತಿದೆ. ಕಳೆದ ಸಲಕ್ಕಿಂತ ವಿಭಿನ್ನವಾದ, ಹೆಚ್ಚು ಸಂತುಲಿತ ಹಾಗೂ ಶಕ್ತಿಶಾಲಿ ತಂಡವಾಗಿ ಕೆಕೆಆರ್‌ ಗೋಚರಿಸುತ್ತಿದೆ.

ತಿರುಗಿ ಬಿದ್ದೀತು ಮುಂಬೈ
ಆರಂಭದ ಕೆಲವು ಪಂದ್ಯಗಳನ್ನು ಸೋಲುತ್ತ ಹೋಗುವುದು ಮುಂಬೈಗೊಂದು ಹವ್ಯಾಸವಾಗಿದೆ. ಹೀಗಾಗಿ ರೋಹಿತ್‌ ಪಡೆಯನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಅದು ಕೂಟದಲ್ಲೇ ಅತ್ಯಂತ “ಸ್ಟ್ರಾಂಗ್‌ ಟೀಮ್‌’. ಯಾವ ಪಂದ್ಯದಲ್ಲೂ ತಿರುಗಿ ಬೀಳಬಲ್ಲ, ಸಿಡಿದು ನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ.

ಕ್ರೀಡೆ – Udayavani – ಉದಯವಾಣಿ
Read More