ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ, ಇದೀಗ ಚೆನ್ನೈ ಸೂಪರ್​ ಕಿಂಗ್ಸ್​ ಕ್ಯಾಂಪ್​ಗೂ ಲಗ್ಗೆ ಇಟ್ಟಿದೆ. ಸಿಎಸ್​ಕೆ ಟೀಮ್​ನಲ್ಲೂ ಮೂವರಿಗೆ ಕೊರೊನಾ ಪಾಸಿಟಿವ್​ ವರದಿಯಾಗಿದ್ದು, ಆತಂಕ ಹೆಚ್ಚಿಸಿದೆ. ಸಮಾಧಾನಕರ ವಿಷಯ ಅಂದರೆ, ತಂಡದ ಆಟಗಾರರಿಗೆ ಸೋಂಕು ತಗುಲಲಿಲ್ಲ. ಸಿಎಸ್​ಕೆ CEO ಕಾಶಿ ವಿಶ್ವನಾಥನ್​, ಬೌಲಿಂಗ್​ ಕೋಚ್​ ಲಕ್ಷ್ಮಿಪತಿ ಬಾಲಾಜಿ ಮತ್ತು ಆಟಗಾರರನ್ನು ಸಾಗಿಸುವ ಬಸ್​​ನ ಕ್ಲೀನರ್​ಗೆ ಸೋಂಕು ತಗುಲಿದೆ.

ಇತ್ತೀಚಿಗೆ ಮಾಡಿಸಿದ ಟೆಸ್ಟ್​ನ ವರದಿ ಭಾನುವಾರ ಬಂದಿದ್ದು, ಪಾಸಿಟಿವ್​ ಎಂದು ವರದಿಯಾಗಿದೆ. ಇಂದು ಮತ್ತೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಸಂಜೆ 4 ಗಂಟೆಗೆ ವರದಿ ಬರಲಿದೆ. ಆ ಬಳಿಕ ಚೆನ್ನೈ ತಂಡ, ಅಧಿಕೃತ ಮಾಹಿತಿಯನ್ನ ನೀಡಲಿದೆ. ಒಂದು ವೇಳೆ ಪಾಸಿಟಿವ್​ ಬಂದರೆ, ಟೀಮ್ ಬಯೋಬಬಲ್​ ತೊರೆದು ಕ್ವಾರಂಟೀನ್ ಆಗಬೇಕಾಗುತ್ತದೆ. 10 ದಿನಗಳ ಕಾಲ ಹೊರ ಭಾಗದಲ್ಲಿ ಚಿಕಿತ್ಸೆ ಪಡೆದು ಐಸೋಲೇಟ್​ ಆಗಬೇಕಾಗುತ್ತದೆ. ಅದಾದ ಬಳಿಕ 2 ನೆಗೆಟಿವ್ ರಿಪೋರ್ಟ್​​ ಬಂದ ಬಳಿಕ, ಬಯೋಬಬಲ್​ ಪ್ರವೇಶಿಸಬೇಕಾಗುತ್ತದೆ.

ಕೊಲ್ಕತ್ತಾದ ಇಬ್ಬರು ಆಟಗಾರರಿಗೆ ಕೂಡ ಕೋವಿಡ್​ ಬಂದಿದೆ. ಮಿಸ್ಟ್ರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಮತ್ತು ಸಂದೀಪ್​ ವಾರಿಯರ್​ಗೆ ಸೋಂಕು ತಗುಲಿದೆ. ಹೀಗಾಗಿ, ಇಂದು ನಡೆಯಬೇಕಿದ್ದ ಆರ್​ಸಿಬಿ ಮತ್ತು ಕೆಕೆಆರ್​​ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ.

The post ಕೆಕೆಆರ್ ಬಳಿಕ ಸಿಎಸ್​ಕೆ ಕ್ಯಾಂಪ್​​ಗೂ ಕೊರೊನಾ ಭೀತಿ…! appeared first on News First Kannada.

Source: newsfirstlive.com

Source link