ಮುಂಬಯಿ :  ಐಪಿಎಲ್ ನ 15 ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ದುಕೊಂಡಿದೆ..

ಮೂರು ಪಂದ್ಯವನ್ನು ಆಡಿ 2 ರಲ್ಲಿ ಸೋತು, ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿರುವ ಮಾರ್ಗನ್ ನೇತೃತ್ವದ ಕೆಕೆಆರ್ ತಂಡ ಒಂದಡೆ ಆದರೆ, ಇನ್ನೊಂದು ಕಳೆದೆರೆಡು ಪಂದ್ಯವನ್ನು ಗೆದ್ದ ಉತ್ಸಾಹದಲ್ಲಿರುವ ಧೋನಿ ನೇತೃತ್ವದ ಚೆನ್ನೈ ತಂಡ ವಾಂಖೇಡೆ ಮೈದಾನದಲ್ಲಿ ಪರಸ್ಪರ ಸೆಣೆಸಾಟ ನಡೆಸಲಿವೆ.

ಸಿಡಿಯಬೇಕಿದೆ ರಸೆಲ್‌: ಐಪಿಎಲ್‌ನಲ್ಲಿ ಕಳೆದೊಂದು ವರ್ಷದಿಂದ ಬ್ಯಾಟಿಂಗ್‌ ಬರ ಅನುಭವಿಸುತ್ತಿರುವ ವಿಂಡೀಸ್‌ ದೈತ್ಯ ಆ್ಯಂಡ್ರೆ ರೆಸಲ್‌ ಕೆಕೆಆರ್‌ ಸೋಲಿಗೊಂದು ಮೂಲವಾಗಿದ್ದಾರೆ. ಅವರು ಮಿಡ್ಲ್ ಆರ್ಡರ್‌ನಲ್ಲಿ ಸಿಡಿದು ನಿಂತರೆ ಮಾರ್ಗನ್‌ ಪಡೆಯ ದೊಡ್ಡದೊಂದು ಸಮಸ್ಯೆ ಪರಿಹಾರಗೊಳ್ಳಲಿದೆ. ಆರ್‌ ಸಿಬಿ ವಿರುದ್ಧ ರಸೆಲ್‌ ಸ್ಫೋಟಿಸಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ಎಡವಿದ್ದರು.

ಕೆಕೆಆರ್‌ ಅಗ್ರ ಕ್ರಮಾಂಕ ಬಲಿಷ್ಠ. ಗಿಲ್‌, ತ್ರಿಪಾಠಿ, ರಾಣಾ ಉತ್ತಮ ಲಯದಲ್ಲಿದ್ದಾರೆ. ಆದರೆ ಇಯಾನ್‌ ಮಾರ್ಗನ್‌, ದಿನೇಶ್‌ ಕಾರ್ತಿಕ್‌ ಬ್ಯಾಟ್‌ ಸದ್ದು ಮಾಡುತ್ತಿಲ್ಲ. ಕೆಕೆಆರ್ ತಂಡವು ಹೈದರಾಬಾದ್ ವಿರುದ್ಧ ಮೊದಲ ಪಂದ್ಯ ಗೆದ್ದರೂ ನಂತರದ ಎರಡು ಸತತ ಪಂದ್ಯಗಳಲ್ಲಿ ಸೋಲನುಭವಿಸಿದೆ.

ತಂಡಗಳು :

ಕೋಲ್ಕತಾ ನೈಟ್ ರೈಡರ್ಸ್ : ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್‌ ಮಾರ್ಗನ್ (ನಾಯಕ,), ದಿನೇಶ್ ಕಾರ್ತಿಕ್ (ಕೀಪರ್), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಪ್ರಸಾದ್ ಕೃಷ್ಣ

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗೈಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ (ಕೀಪರ್ / ನಾಯಕ), ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಲುಂಗಿ ಎನ್‌ಜಿಡಿ, ದೀಪಕ್ ಚಹರ್

ಕ್ರೀಡೆ – Udayavani – ಉದಯವಾಣಿ
Read More