ಕೆಜಿಎಫ್​​ಗೆ ಪುಷ್ಪ ಸಿನಿಮಾ ಹೋಲಿಕೆ.. ಆದ್ರೆ ನಿರೀಕ್ಷೆ ಹುಸಿ ಆಯ್ತು ಎಂದ ಅಭಿಮಾನಿಗಳು!


ಟಾಲಿವುಡ್​ ಸ್ಟಾರ್​ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್​ ಸಿನಿಮಾ “ಪುಷ್ಪ” ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ ಎಂಬ ಮಾತುಗಳು ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ನಿನ್ನೆ ಚಿತ್ರದ ಟ್ರೈಲರ್​ ಕೂಡ ಬಹಳ ತಡವಾಗಿ ರಿಲೀಸ್​ ಆಗಿತ್ತು. ಇನ್ನು ಈ ಟ್ರೈಲರ್ ಒಂದಿಷ್ಟು ಜನಕ್ಕೆ ಇಷ್ಟವಾಗಿದ್ರೆ, ಮತ್ತೊಂದೊಂದಿಷ್ಟು ಜನಕ್ಕೆ ಪುಷ್ಪ ಚಿತ್ರದ ಆಷ್ಟಾಗಿ ಇಷ್ಟವಾಗಿಲ್ಲ.

“ಪುಷ್ಪ” ಪ್ಯಾನ್​ ಇಂಡಿಯಾ ಸಿನಿಮಾ ಆದ ಕಾರಣ ಸಿನಿ ಪ್ರೇಕ್ಷಕರು ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ “ಪುಷ್ಪ” ಟ್ರೈಲರ್​ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಅಂತಾ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಷಯವಾಗಿ ನೆಟ್ಟಿಗರು ಪುಷ್ಪ ಚಿತ್ರದ ಟ್ರೈಲರ್​ ಅನ್ನು ಟ್ರೋಲ್​ ಮಾಡುತ್ತಿದ್ದಾರೆ.

ಟಾಲಿವುಡ್​ ನಿರ್ದೇಶಕ ಸುಕುಮಾರ್​ ನಿರ್ದೇಶನದಲ್ಲಿ ಮೂಡಿ ಬಂದಿರುವ “ಪುಷ್ಪ” ಚಿತ್ರದ ಟ್ರೈಲರ್​ ಅನ್ನು ಇನೂ ಕೆಲವರು ರಾಕಿಂಗ್​ ಸ್ಟಾರ್​ ಯಶ್​ ಅವರ ಕೆಜಿಎಫ್​ ಚಿತ್ರಕ್ಕೆ ಹೊಲಿಸಿದ್ದಾರೆ. ಪುಷ್ಪ ಚಿತ್ರ ಕೆಜಿಎಫ್​ ಚಿತ್ರದ ರೇಂಜ್​ನಲ್ಲಿ ಇರಲಿದೆ ಅಂತ ಕೆಲ ಅಭಿಮಾನಿಗಳು ಎಕ್ಸ್​ಪೆಕ್ಟ್​ ಮಾಡಿದ್ರು. ಆದರೆ “ಪುಷ್ಪ” ಚಿತ್ರದ ಟ್ರೈಲರ್​ ಕೆಜಿಎಫ್​ ಸಿನಿಮಾದಷ್ಟಿಲ್ಲ ಅಂತ ಒಂದಿಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರದ ಶೂಟಿಂಗ್ ಹಂತದಲ್ಲಿ ಪುಷ್ಪ ಸಿನಿಮಾವನನ್ನು ಕನ್ನಡದ ಕೆಜಿಎಫ್​ಗೆ ಚಿತ್ರತಂಡ ಹೋಲಿಕೆ ಮಾಡಿತ್ತು. ನಮ್ಮ ಚಿತ್ರ ಕೆಜಿಎಫ್​ಗಿಂತಲೂ ದೊಡ್ಡ ಮಟ್ಟದಲ್ಲಿ ಮೂಡಿ ಬಂದಿದೆ. ನಮ್ಮದು ಕೂಡ ಫ್ಯಾನ್​ ಇಂಡಿಯಾ ಸಿನಿಮಾ ಎಂದು ನಿರ್ಮಾಪಕರು ಹೇಳಿದ್ದರು. ನಿರ್ಮಾಪಕರ ಈ ಹೇಳಿಕೆ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಸದ್ಯ ಪುಷ್ಪ ಟ್ರೈಲರ್​ ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದೆ. ಈ ನಡುವೆ ಅಲ್ಲು ಅರ್ಜುನ್​​ಗೆ ಕ್ಲಾಸ್​ ಇಮೇಜ್​ ತಂದು ಕೊಟ್ಟಿದ್ದ ನಿರ್ದೇಶಕ ಸುಕುಮಾರ್​​ ಚಿತ್ರದಲ್ಲಿ ಐಕಾನ್​ ಸ್ಟಾರ್​ಗೆ ಮಾಸ್​ ಇಮೇಜ್ ಕೊಟ್ಟಿದ್ದು, ಸಿನಿಮಾ ಕೆಜಿಎಫ್​​ಗಿಂತಲೂ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

News First Live Kannada


Leave a Reply

Your email address will not be published. Required fields are marked *