ಕರ್ನಾಟಕ ಮಾತ್ರವಲ್ಲದೇ ಹತ್ತಿರದ ಟಾಲಿವುಡ್​, ಕಾಲಿವುಡ್​, ಬಾಲಿವುಡ್​ನಲ್ಲೂ ಕಳೆದ ಎರಡೂವರೆ ವರ್ಷಗಳಿಂದ ಕೆಜಿಎಫ್​ದೇ ಅಬ್ಬರ. ಕನ್ನಡ ಚಿತ್ರರಂಗದತ್ತ ತಿರುಗಿ ಎಲ್ಲರೂ ತಿರುಗಿ ನೋಡುವಂತೆ ಮಾಡಿದ ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ಮುದ್ದಿನ ಕೂಸು, ಸದ್ಯ ನಿರಾಸೆಯ ಸುದ್ದಿ ಕೊಟ್ಟಿದೆ. ಹೌದು.. ಜುಲೈ 16ರಂದು ಕೆಜಿಎಫ್​ ಚಾಪ್ಟರ್​ 2 ಸಿನಿಮಾ ರಿಲೀಸ್​ ಆಗಲಿದೆ ಅಂತ ಚಿತ್ರತಂಡ ಅಧಿಕೃತವಾಗಿ ಅನೌನ್ಸ್​ ಮಾಡಿತ್ತು. ಆದ್ರೀಗ ನಿಗದಿತ ದಿನಕ್ಕೆ ರಿಲೀಸ್​ ಆಗದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಕರ್ನಾಟಕ ಸೇರಿದಂತೆ ಒಂದಷ್ಟು ರಾಜ್ಯಗಳಲ್ಲಿ ಸದ್ಯ ಲಾಕ್​ಡೌನ್​ ಹೇರಲಾಗಿದ್ದು, ಚಿತ್ರರಂಗ ಕೂಡ ಸ್ತಬ್ಧವಾಗಿದೆ. ಥಿಯೇಟರ್​ಗಳಿಗೆಲ್ಲಾ ಬೀಗ ಹಾಕಲಾಗಿದ್ದು, ಎಲ್ಲಾ ರಾಜ್ಯಗಳಲ್ಲೂ ಚಿತ್ರಮಂದಿರಗಳು 100% ಓಪನ್ ಆಗುವವರೆಗೂ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ರಿಲೀಸ್ ಆಗಲ್ಲ ಅನ್ನೋ ಮಾಹಿತಿ ನ್ಯೂಸ್​ ಫಸ್ಟ್​ಗೆ ಸಿಕ್ಕಿದೆ.

ಸದ್ಯ ರಾಜ್ಯದಲ್ಲಿ ಲಾಕ್​ಡೌನ್ ಹೇರಲಾಗಿದ್ದು, ಆಗಸ್ಟ್​​ವರೆಗು ಚಿತ್ರ ಮಂದಿರಗಳನ್ನ ತೆರೆಯೋದಕ್ಕೆ ಸರ್ಕಾರ ಗ್ರೀನ್​ ಸಿಗ್ನಲ್​ ನೀಡುವ ಸಾಧ್ಯತೆ ತೀರ ಕಡಿಮೆಯಿದೆ. ಅಲ್ಲದೇ ಲಾಕ್​ಡೌನ್​ನಿಂದಾಗಿ ಕೆಜಿಎಫ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಸಾಕಷ್ಟು ಬಾಕಿ ಇದ್ದು, ಜುಲೈ 16ಕ್ಕೆ ರಾಕಿ ಭಾಯ್​ ಥಿಯೇಟರ್​ಗೆ ಲಗ್ಗೆ ಇಡುವ ಸಾಧ್ಯತೆ ಇಲ್ಲ. ಇದಲ್ಲದೇ ವಿದೇಶದಲ್ಲೂ  ಕೆಜಿಎಫ್ ರಿಲೀಸ್ ಆಗಲಿದ್ದು, ಅಲ್ಲಿ ಉತ್ತಮ ಸಮಯ ನೋಡಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಅಲೋಚಿಸುತ್ತಿದೆ ಅನ್ನೋ ಮಾಹಿತಿ ನ್ಯೂಸ್ ಫಸ್ಟ್​ಗೆ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

The post ಕೆಜಿಎಫ್​ ಚಾಪ್ಟರ್​ 2ಗಾಗಿ ಕಾದು ಕುಳಿತಿರುವವರಿಗೆ ನಿರಾಸೆ; ರಾಕಿ ಭಾಯ್ ಫ್ಯಾನ್ಸ್​​ಗೆ ಮತ್ತೆ ಶಾಕ್​ appeared first on News First Kannada.

Source: newsfirstlive.com

Source link