ಕೆಜಿಎಫ್​-2 ಹಿಂದಿಗೂ ಸ್ವತಃ ಯಶ್ ಧ್ವನಿ ನೀಡಲಿದ್ದಾರಂತೆ..!​​​


ರಾಕಿಂಗ್​ ಸ್ಟಾರ್ ಯಶ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್​ ಮೂವಿ ‘ಕೆಜಿಎಫ್​-2 ’ ಚಿತ್ರದ ಹಿಂದಿ ಆವೃತ್ತಿಯಲ್ಲಿ ಸ್ವತಃ ಯಶ್​ ಅವರೆ ತಮ್ಮ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ‘

ಹೌದು ಹಿಂದಿ ಭಾಷೆಯನ್ನು ಬಹಳ ಚೆನ್ನಾಗಿ ಮಾತನಾಡುವ ಯಶ್​ ಕೆಜಿಎಫ್​​ -1 ರ ಹಿಂದಿ ಅವೃತಿಯಲ್ಲಿ ​ ತಮ್ಮ ಪಾತ್ರಕ್ಕೆ ​ ಧ್ವನಿ ನೀಡಿರಲಿಲ್ಲ. ಆದರೆ ಲಾಕ್​ಡೌನ್​ ಟೈಮ್​ನಲ್ಲಿ ಬಹಳಷ್ಟು  ಸಮಯವಿದ್ದ ಕಾರಣ ಯಶ್​ ಹಿಂದಿ ಭಾಷೆ ಮಾತನಾಡುವ ಶೈಲಿಯನ್ನು ಮತಷ್ಟು ಉತ್ತಮಗೊಳಿಸಿ ಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕೆಲ ವರದಿಗಳ ಪ್ರಕಾರ ಖ್ಯಾತ ಹಿಂದಿ ಬರಹಗಾರ ಜೊತೆ ದೂರವಾಣಿ ಮೂಲಕ ಮಾತನಾಡಿದ ಯಶ್​  ‘ನನ್ನ ಹಿಂದಿ ಚೆನ್ನಾಗಿದೆ. ಅದರೆ ಕೆ.ಜಿ.ಎಫ್​ ಭಾಗ ಒಂದರಲ್ಲಿ ನನ್ನ ಸ್ವಂತ ಧ್ವನಿಯಲ್ಲಿ  ಡಬ್​ ಮಾಡವಷ್ಟು ಉತ್ತಮವಾಗಿ ಇರಲಿಲ್ಲ ಆದರೆ ಈಗ ನಾನು ಹಿಂದಿ ಮಾತನಾಡುವ ಶೈಲಿ ಸುಧಾರಣೆಗೊಂಡಿದೆ’ ಎಂದಿದ್ದಾರಂತೆ. ಹೀಗಾಗಿ ಕೆಜಿಎಫ್​-2 ಹಿಂದಿ ಅವೃತಿಯಲ್ಲಿ ​ ಸ್ವತಃ ಯಶ್​ ತಮ್ಮ ಪಾತ್ರಕ್ಕೆ ತಾವು ಧ್ವನಿ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಬಾಲಿವುಡ್​ ಅಂಗಳದಲ್ಲಿ ಕೇಳಿ ಬರುತ್ತಿದೆ.

ಇಡೀ ಭಾರತೀಯ ಚಿತ್ರರಂಗವೇ ಕೆಜಿಎಫ್​-2 ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ಮುಂದಿನ ವರ್ಷ ಏಪ್ರಿಲ್​ 14 ನೇ ತಾರೀಖು ಚಿತ್ರ ಬಿಡುಗಡೆಯಾಲಿದೆ.

 

News First Live Kannada


Leave a Reply

Your email address will not be published. Required fields are marked *