ದಕ್ಷಿಣ ಭಾರತದ ಭಾರೀ ನಿರೀಕ್ಷಿತ ಅಗ್ರಮಾನ್ಯ ಸಿನಿಮಾಗಳ ಪಟ್ಟಿಯಲ್ಲಿ ಒಂದು ಕೆಜಿಎಫ್ ಚಾಪ್ಟರ್ 2 ಮತ್ತೊಂದು ಥ್ರಿಬಲ್ ಆರ್ ಸಿನಿಮಾಗಳಿವೆ.. KGF-2 ಚಿತ್ರದ ದಾರಿಯೇ ಸಪರೇಟ್ RRR ಚಿತ್ರದ ದಾರಿಯೇ ಸಪರೇಟ್​​. ಆದ್ರೂ ಈ ಎರಡು ಸಿನಿಮಾಗಳಿಗೆ ಕ್ಲಾಶ್ ಆಗುತ್ತೆ ! KGF-2 ದೊಡ್ಡದಾ RRR ದೊಡ್ಡದಾ ಅನ್ನೋ ಪೈಪೋಟಿ ಶುರುವಾಗೇ ಆಗುತ್ತೆ ಅಂತಿದೆ ಸಿನಿ ಭವಿಷ್ಯ.

ಒಂದು ಕಾಲ ಇತ್ತು ಅಕ್ಕ ಪಕ್ಕದ ಸಿನಿಮಾದವರ ರೇಂಜ್​​ಗೆ ನಮ್ಮ ಸಿನಿಮಾಗಳು ಬರಬೇಕು ಅಂತ.. ನೆನ್ನೆ ಮೊನ್ನೆ ತನಕ ಒಂದು ಕಾಲ ಇತ್ತು ಬೇರೆ ಭಾಷೆಯ ಸಿನಿಮಾಗಳನ್ನ ಮೀರಿಸೋ ಮಟ್ಟಕ್ಕೆ ನಮ್ಮ ಸಿನಿಮಾಗಳು ಬೆಳಿತ್ತಿದ್ದಾವೆ ಅಂತ.. ಆದ್ರೆ ಈಗ ಕೆಜಿಎಫ್ ರೇಂಜ್​​ಗೆ ನಾವು ಸಿನಿಮಾ ಮಾಡಬೇಕು ಅಂತ ಅಕ್ಕ ಪಕ್ಕದ ಸಿನಿಮಾ ಮಂದಿ ಯೋಚಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾವನ್ನ ಮೀರಿಸೋ ಸಿನಿಮಾವನ್ನ ನಾವು ಮಾಡಬೇಕು ಅನ್ನೋ ಕಲ್ಪನೆಯಿಂದ ಅಕ್ಕಪಕ್ಕದ ಸಿನಿಮಾ ಮಂದಿ ಹೊಸ ಸಿನಿಮಾ ಮಾಡ್ತಿದ್ದಾರೆ ಅನ್ನೋ ಮಾತಿಗೆ ಬೆಸ್ಟ್ ಆಂಡ್ ಜಸ್ಟ್ ಎಗ್ಸಾಂಪಲ್ ಪುಷ್ಪ.. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಇನೇನು ಬಂದೇ ಬಿಡ್ತು ಅಂತ ಹೇಳ್ತಿದ್ದವರು ಈಗ ಇಲ್ಲ ನಮ್ಮದು ಎರಡೆರಡು ಭಾಗದಲ್ಲಿ ಸಿನಿಮಾಗಳು ಬರ್ತಿದ್ದಾವೆ, ಹತ್ತು ಕೆಜಿಎಫ್ ಸೇರಿದ್ರೆ ಒಂದು ಪುಷ್ಪ ಅಂತೆಲ್ಲ ಟಾಲಿವುಡ್ ವಲಯ ಮಾತನಾಡುತ್ತಿದೆ.

 

ಮರಕ್ಕಿಂತ ಮರ ದೊಡ್ಡದ್ದು ಅನ್ನೋಂಗೆ ಸಿನಿಮಾಕ್ಕಿಂತ ಸಿನಿಮಾ ದೊಡ್ಡದು ಎನ್ನಬಹುದು.. ಸಮಸ್ತ ಇಂಡಿಯನ್ ಸಿನಿ ಪ್ರೇಕ್ಷಕ ಕುಲ ‘ಕೆಜಿಎಫ್ ಚಾಪ್ಟರ್-2’ ಹಾಗೂ ರಾಜಮೌಳಿಯವರ ‘ರಣ ರೌದ್ರ ರುಧಿರ’ ಸಿನಿಮಾದ ಬಗ್ಗೆ ಮಾತನಾಡುತ್ತಿದೆ. ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ನಟನೆಯ KGF-2 ದೊಡ್ಡದಾ? ರಾಜಮೌಳಿ ನಿರ್ದೇಶನದ ಜೂ.ಎನ್​​.ಟಿ.ಆರ್, ರಾಮ್ ಚರಣ್ ನಟನೆಯ RRR ದೊಡ್ಡದಾ? ಅನ್ನೋ ಸಿನಿಲೆಕ್ಕಾಚಾರ ಶುರುವಾಗಿದೆ.

ಹೌದು.. ಕೆಜಿಎಫ್ ಚಾಪ್ಟರ್ -2 ಚಿತ್ರ ಯಶ್ ಬರ್ತ್​ಡೇ ಟೀಸರ್ ದೊಡ್ಡ ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದೆ. ಬರೋಬ್ಬರಿ 200 ಮಿಲಿಯನ್ ಅಂದ್ರೆ 20 ಕೋಟಿ ವೀಕ್ಷಣೆಯಾದ ಭಾರತೀಯ ಚಿತ್ರರಂಗ ಮೊಟ್ಟ ಮೊದಲ ಸಿನಿಮಾ ಟೀಸರ್ ಅನ್ನೋ ಹೆಗ್ಗಳಿಕೆಯ ಹೂವಿನ ಹಾರವನ್ನ ರಾಕಿ ಭಾಯ್ ಸಿನಿಮಾ ಹಾಕಿಸಿಕೊಂಡಿದೆ.. ಈ ದಾಖಲೆಯ ಮುಂದೆ ಥ್ರಿಬಲ್ ಆರ್ ಸಿನಿಮಾ ಸಣ್ಣದಾಗಿ ಕಾಣುತ್ತಿದೆ.. ಥ್ರಿಬಲ್ ಆರ್ ಸಿನಿಮಾದ ಅಷ್ಟು ಕಂಟೆಂಟ್​ಗಳ ವೀಕ್ಷಣೆಯ ಲೆಕ್ಕಚಾರ ಸೇರಿದ್ರು ಕೆಜಿಎಫ್ ಚಾಫ್ಟರ್ 2 ಟೀಸರ್​ ವೀಕ್ಷಣೆಯ ಲೆಕ್ಕದ ಅರ್ಧ ಪಾಲು ಹತ್ತಿರ ಬರುತ್ತಿಲ್ಲ. ಟೀಸರ್​​ನಿಂದ ಒಂದು ಸಿನಿಮಾ ಹೆಚ್ಚಾ ಕಡಿಮೆನಾ ಅಂತ ಅಳೆದು ತೂಗೋದು ಕಷ್ಟ. ಆದ್ರೆ ಈ ಎರಡು ಸಿನಿಮಾದ ಮೇಲೆ ಭಾರತೀಯ ಚಿತ್ರರಂಗ ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದೆ.

The post ‘ಕೆಜಿಎಫ್ ಚಾಪ್ಟರ್-2’ ಗಿಂತಲೂ ಅದ್ಧೂರಿಯಾಗಿರುತ್ತಾ ‘ರಣ ರೌದ್ರ ರುಧಿರ’..? appeared first on News First Kannada.

Source: newsfirstlive.com

Source link