ಕೆಜಿಎಫ್ ಚಾಪ್ಟರ್ 2 ತಂಡ ಕುಂದಾಪುರದಲ್ಲೇ ಯಾಕೆ ಠಿಕಾಣಿ ಹೂಡಿದೆ ಗೊತ್ತಾ..?


ಭಾರತೀಯ ಚಿತ್ರರಂಗವೇ ನಿರೀಕ್ಷೆಯಿಂದ ಎದುರು ನೋಡ್ತಾ ಇರೋ ಸಿನಿಮಾ ‘ಕೋಲಾರ ಗೋಲ್ಡ್ ಫಿಲ್ಡ್’ ಅರ್ಥಾಥ್ ಕೆಜಿಎಫ್ ಚಾಪ್ಟರ್ 2.. ರಿಲೀಸ್ ಟೈಮ್ ಹತ್ರ ಬಂದಾಗ ದೊಡ್ಡ ದೊಡ್ಡ ಸಿನಿಮಾ ತಂಡಗಳು ಮಹಾನಗರಗಳಂತಹ ಮುಂಬೈ, ದೆಹಲಿ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ನಗರಗಳಲ್ಲಿ ಇರುತ್ತವೆ. ಆದ್ರೆ ಕೆಜಿಎಫ್ ಸಿನಿಮಾ ತಂಡ ಕುಂದಾಪುರದ ಬಸ್ರೂರ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಟಿಕಾಣಿ ಹೂಡಿದೆ. ಅಲ್ಯಾಕೆ ಇದೆ ರಾಕಿ ಭಾಯ್ ಟೀಮ್ ಅಂತ ಯೋಚಿಸಿ ವಿಚಾರಿಸಿದ ನಮಗೆ ಒಂದು ಅಚ್ಚರಿಯ ವಿಶೇಷ ವಿಚಾರ ಸಿಕ್ಕಿದೆ.

History tells us that powerful people come from powerful places. ಇದು ಕೆಜಿಎಫ್ ಚಾಪ್ಟರ್ 1ರ ಪವರ್ ಫುಲ್ ಡೈಲಾಗ್.. ಆದ್ರೆ ಕೆಜಿಎಫ್ ಚಾಪ್ಟರ್ 2ನಲ್ಲಿ History was wrong! Powerful people make places powerful.. ಅಂತ ಪ್ರಕಾಶ್ ರೈ ಹತ್ತಿರ ಹೇಳಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. Powerful people make places powerful.. ಅನ್ನೋ ಡೈಲಾಗ್ ಅನ್ನ ಚಿತ್ರತಂಡ ಸಿನಿಮಾಕ್ಕೆ ಮಾತ್ರ ಮೀಸಲಾಗಿ ಇಡುತ್ತಿಲ್ಲ ಅನ್ಸುತೆ.. ತಮ್ಮ ಸಿನಿಮಾದ ಡೈಲಾಗ್ ಅನ್ನೇ ತಮ್ಮ ಜೀವನಕ್ಕೆ ಅಳವಡಿಸಿಕೊಂಡಂಗೆ ಕಾಣುತ್ತಿದೆ.. ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ತಂಡ ಕುಂದಾಪುರದ ಬಸ್ರೂರ್ ಗ್ರಾಮದಲ್ಲಿ ಇದೆ.

ಕುಂದಾಪುರದ ಬಸ್ರೂರ್ ಗ್ರಾಮದಲ್ಲಿ KGF ಟೀಮ್
ಭಾರತೀಯ ಚಿತ್ರರಂಗವೇ ನಿರೀಕ್ಷೆಯಿಂದ ಎದುರು ನೋಡ್ತಾ ಇರೋ ಸಿನಿಮಾ ಕೆಜಿಎಫ್ ಚಾಫ್ಟರ್ 2 ಸಿನಿಮಾ.. ಇನ್ನೂ 38 ದಿನಗಳಿವೆ ಕೆಜಿಎಫ್ ಎರಡನೇ ಅಧ್ಯಾಯ ತೆರೆಕಾಣಲು. ರಿಲೀಸ್ ಟೈಮ್ ಹತ್ರ ಬಂದಾಗ ದೊಡ್ಡ ದೊಡ್ಡ ಸಿನಿಮಾ ತಂಡಗಳು ಮಹಾನಗರಗಳಂತಹ ಮುಂಬೈ, ದೆಹಲಿ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ನಗರಗಳಲ್ಲಿ ಇರುತ್ತವೆ. ಆದ್ರೆ ಕೆಜಿಎಫ್ ಸಿನಿಮಾ ತಂಡ ಕುಂದಾಪುರದ ಬಸ್ರೂರ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಬೀಡುಬಿಟ್ಟಿದೆ. ಮೂರು ನಾಲ್ಕು ದಿನಗಳ ಹಿಂದೆ ಕುಂದಾಪುರದ ಬಸ್ರೂರ್​ನಲ್ಲಿ ಕ್ರಿಕೆಟ್ ಆಡಿತ್ತು ಕೆಜಿಎಫ್ ತಂಡ. ತದ ನಂತರ ಆನೆಗುಡ್ಡ ಗಣಪತಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿಕೊಟ್ಟಿತ್ತು. ಇದು ಸಿನಿಮಾ ಪ್ರಮೋಷನ್ ತಯಾರಿ ಅಂತೆಲ್ಲ ಸಿನಿಮಾ ಪಂಡಿತರು ಬಣ್ಣಿಸಿದ್ದರು.

 

ಒಂದು ದಿವನ ಎರಡು ದಿವಸ; ಅಮ್ಮ್ ಅಮ್ಮಾ ಅಂದ್ರೆ ಐದು ದಿನ. ಆದ್ರೆ ಕಳೆದ ಒಂದು ವಾರದಿಂದ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ ಕಿರಿಗಂದೂರು ಹಾಗೂ ರಾಕಿಂಗ್ ಸ್ಟಾರ್ ಯಶ್ ಆಂಡ್ ಟೀಮ್ ಕುಂದಾಪುರ ಬಸ್ರೂರ್​ನಲ್ಲೇ ಇದೆ.. ಅಲ್ಯಾಕೆ ಇದೆ ರಾಕಿ ಭಾಯ್ ಟೀಮ್ ಅಂತ ಯೋಚಿಸಿ ವಿಚಾರಿಸಿದಾಗ ನಮಗೆ ಒಂದು ಅಚ್ಚರಿಯ ವಿಶೇಷ ವಿಚಾರ ಸಿಕ್ಕಿದೆ. History was wrong! Powerful people make places powerful..ಅಂತ ಕೆಜಿಎಫ್ ಟೂ ಟೀಸರ್​​ನಲ್ಲಿ ಹೇಳ್ದಂಗೆ ಬಸ್ರೂರ್ ಗ್ರಾಮವನ್ನ ಪವರ್ ಫುಲ್ ಪ್ಲೇಸ್ ಅನ್ನ ಮಾಡಲು ಕೆಜಿಎಫ್ ತಂಡ ಡಿಸೈಡ್ ಮಾಡಿದೆ.

ಬಸ್ರೂರ್​.. ಈ ಊರಿನಿಂದ ಅನೇಕ ಪ್ರತಿಭಾವಂತರ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.. ಬಸ್ರೂರ್​​ ಗ್ರಾಮದಿಂದ ಬರುತ್ತಿರುವ ಪ್ರತಿಭಾವಂತರಿಗೆಲ್ಲ ಈಗ ಕ್ಯಾಪ್ಟನ್ ಸಂಗೀತ ನಿರ್ದೇಶಕ ರವಿ ಬಸ್ರೂರ್. ಪ್ರಕೃತಿಯ ನಡುವೆ ತನ್ನೂರಿನಲ್ಲೇ ಒಂದು ಸುರ್ಜಿತ ಸ್ಟುಡಿಯೋ ಮಾಡ್ಕೊಂಡು ಸಿನಿಮಾಗಳ ಸಂಗೀತ ಕಾರ್ಯವನ್ನ ಮಾಡ್ತಾ ಇದ್ದಾರೆ ರವಿ ಬಸ್ರೂರ್​.. ಈಗ ಕೆಜಿಎಫ್ ಸಿನಿಮಾದ ಫೈನಲ್ ಎಡಿಟಿಂಗ್ ಪ್ಲಸ್ ಸೌಂಡ್ ಮಿಕ್ಸಿಂಗ್ ಕೆಲಸ ನಡೆಯುತ್ತಿದ್ದು ಕಳೆದ ಒಂದು ವಾರದಿಂದ ಕೆಜಿಎಫ್ ಸಿನಿಮಾತಂಡ ರವಿಬಸ್ರೂರ್ ಸ್ಟುಡಿಯೋದಲ್ಲಿ ಬೀಡು ಬಿಟ್ಟಿದೆ.

ಬಸ್ರೂರ್​​ನಲ್ಲಿ ನಡೆಯುತ್ತಿದೆ KGF2 ಫೈನಲ್ ಎಡಿಟಿಂಗ್
ಕೆಜಿಎಫ್ ಪಾರ್ಟ್ 2 ಚಿತ್ರದ ಫೈನಲ್ ಎಟಿಡಿಂಗ್ ಮತ್ತು ಸೌಂಡ್ ಮಿಕ್ಸಿಂಗ್ ಕೆಲಸಗಳು ನಡೆಯುತ್ತಿದೆ. ಈ ಕಾರಣದಿಂದಾಗಿ ಕೆಜಿಎಫ್ ಚಿತ್ರತಂಡ ರವಿ ಬಸ್ರೂರ್ ಸ್ಟುಡಿಯೋದಲ್ಲಿ ಸೆಟಲ್ ಆಗಿದೆ. ಕುಂದಾಪುರದ ಬಸ್ರೂರ್​ಗೆ ಕೆಜಿಎಫ್ ತಂಡ ಮತ್ತು ಯಶ್ ಬಂದಿರೋದನ್ನ ತಿಳಿದ ಸುತ್ತ ಮುತ್ತಲಿನ ಯುವ ಅಭಿಮಾನಿಗಳು ಯಶ್ ಅವರನ್ನ ನೋಡಲು ನೂರಾರು ಸಾವಿರಾರು ಸಂಖೆಯಲ್ಲಿ ಬರುತ್ತಿದ್ದಾರೆ.

ಒಟ್ಟಿನಲ್ಲಿ Powerful people make places powerful ಅನ್ನೋ ಡೈಲಾಗ್ ಅನ್ನ ಚಿತ್ರ ತಂಡ ನಿಜಮಾಡಲು ಹೊರಟಿದೆ.. ಬಾಂಬೆ , ಮದ್ರಾಸು ಅಂತೆಲ್ಲ ಹೊಗುತ್ತಿದ್ದ ಮಂದಿಗೆ ತನ್ನೂರಲ್ಲೇ ಅತ್ಯಾಧುನಿಕ ತಂತ್ರಜ್ಞಾನವನ್ನ ಸಿನಿಮಾಗಳಿಗೆ ಸಿಗೋ ಹಾಗೆ ಮಾಡ್ತಿರೋದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಉತ್ತಮ ಬೆಳವಣಿಗೆ.

ವಿಶೇಷ ವರದಿ: ಶ್ರೀಧರ್ ಶಿವಮೊಗ್ಗ ಫಿಲ್ಮ್ ಬ್ಯೂರೋ

News First Live Kannada


Leave a Reply

Your email address will not be published.