ಕೆಜಿಎಫ್-2ನಲ್ಲಿ ಮಾನ್‍ಸ್ಟರ್ ಕಥೆ- ಶೀಘ್ರದಲ್ಲೇ ರಿಲೀಸ್ ಡೇಟ್

ಬೆಂಗಳೂರು: ಕೆಜಿಎಫ್-2 ಸಿನಿಮಾ ಕುರಿತು ಸಾಕಷ್ಟು ಕುತೂಹಲಗಳು ಮನೆ ಮಾಡಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಬಿಡುಗಡೆ ದಿನಾಂಕ ಮುಂದೂಡುತ್ತಲೇ ಇದೆ. ಇದೇ ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಖುಷಿ ವಿಚಾರವನ್ನು ಹಂಚಿಕೊಂಡಿದ್ದು, ಕೆಜಿಎಫ್-2 ಬಿಡುಗಡೆಯ ದಿನಾಂಕದ ಕುರಿತು ಸುಳಿವು ನೀಡಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಮಾನ್‍ಸ್ಟರ್ ಕಥೆಯ ಮೂಲಕ ಸಿನಿಮಾ ಬಿಡುಗಡೆ ದಿನಾಂಕದ ಸುಳಿವು ನಿಡಿದ್ದಾರೆ. ಗ್ಯಾಂಗ್‍ಸ್ಟರ್ ಗಳಿಂದ ಹಾಲ್ ತುಂಬಿದಾಗ ಮಾತ್ರ ಮಾನ್‍ಸ್ಟರ್ ಎಂಟ್ರಿ ಕೊಡಲಿದ್ದಾನೆ. ಅವನ ಆಗಮನದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಹರಿ ಮ್ಯೂಸಿಕ್ ಪಾಲಾಯ್ತು ಕೆಜಿಎಫ್ 2 ಆಡಿಯೋ ರೈಟ್ಸ್

 

View this post on Instagram

 

A post shared by Prashanth Neel (@prashanthneel)

ಹೀಗೆ ಮಾಸ್ ಡೈಲಾಗ್ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಚಿತ್ರ ತಂಡ, ಶೀಘ್ರದಲ್ಲೇ ಚಿತ್ರ ಬಿಡುಗಡೆಯ ಹೊಸ ದಿನಾಂಕ ಘೋಷಣೆಯ ಸುಳಿವು ನೀಡಿದೆ. ಈ ಮೂಲಕ ಕಾತರದಿಂದ ಕಾಯುತ್ತಿರುವ ಯಶ್ ಅಭಿಮಾನಿಗಳಿಗೆ ಗುಡ್ ಸಿಕ್ಕಂತಾಗಿದೆ. ಇದನ್ನೂ ಓದಿ:ದಾಖಲೆಗಳ ಧೂಳೆಬ್ಬಿಸಿದ ಕೆಜಿಎಫ್-2 – ‘ರಣಬೇಟೆಗಾರ’ನ ಅಬ್ಬರಕ್ಕೆ ಯೂಟ್ಯೂಬ್ ದಾಖಲೆಗಳೆಲ್ಲ ಉಡೀಸ್

ಈಗಾಗಲೇ ಕೆಜಿಎಫ್ ಚಾಪ್ಟರ್-2ರ ಎಲ್ಲ ಹಾಡುಗಳ ಹಕ್ಕನ್ನು ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿದೆ. ಲಹರಿ ಚಿತ್ರದ ಎಲ್ಲ ಹಾಡುಗಳನ್ನು ಭಾರೀ ಮೊತ್ತಕ್ಕೆ ಲಹರಿ ಸಂಸ್ಥೆ ಖರೀದಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಐದು ಭಾಷೆಯ ಎಲ್ಲ ಹಾಡುಗಳು ಲಹರಿ ಸಂಸ್ಥೆಯ ಲೈಬ್ರರಿ ಸೇರಿಕೊಂಡಿವೆ. ಕೆಜಿಎಫ್-2 ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಈ ಹಿಂದೆ ಕೆಜಿಎಫ್ ಚಾಪ್ಟರ್-1ರ ಹಾಡುಗಳ ಹಕ್ಕನ್ನು ಲಹರಿ ಸಂಸ್ಥೆಯೇ ಖರೀದಿಸಿತ್ತು.

ಇದೇ ಜುಲೈ 16ರಂದು ಕೆಜಿಎಫ್-2 ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಆದರೆ ಕೊರೊನಾ ಎರಡನೇ ಅಲೆ ಹಿನ್ನೆಲೆ ಚಿತ್ರಮಂದಿರಗಳು ಸ್ತಬ್ಧಗೊಂಡಿವೆ. ಕರ್ನಾಟಕದಲ್ಲಿ ಅನ್‍ಲಾಕ್ ಪ್ರಕ್ರಿಯೆ ಆರಂಭವಾದರೂ ಥಿಯೇಟರ್ ಗಳಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಆದರೆ ಕೆಲವೇ ದಿನಗಳಲ್ಲಿ ಚಿತ್ರ ಮಂದಿರಗಳು ಸಹ ತೆರೆಯಲಿವೆ. ಹೀಗಾಗಿ ಈ ಎಲ್ಲ ಪರಿಸ್ಥಿತಿಯನ್ನು ನೊಡಿಕೊಂಡು ಇದೀಗ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಅಭಿಮಾನಿಗಳು ಆದಷ್ಟು ಬೇಗ ಚಿತ್ರವನ್ನು ರಿಲೀಸ್ ಮಾಡಬೇಕೆಂದು ಸೋಶಿಯಲ್ ಮೀಡಿಯಾ ಮೂಲಕ ಒತ್ತಾಯಿಸಿದ್ದರು.

The post ಕೆಜಿಎಫ್-2ನಲ್ಲಿ ಮಾನ್‍ಸ್ಟರ್ ಕಥೆ- ಶೀಘ್ರದಲ್ಲೇ ರಿಲೀಸ್ ಡೇಟ್ appeared first on Public TV.

Source: publictv.in

Source link