‘ಕೆಜಿಎಫ್​ 2’ ಎಡಿಟರ್​ ವಯಸ್ಸು ಕೇವಲ 20 ವರ್ಷ; ಫ್ಯಾನ್​ ಮೇಡ್ ವಿಡಿಯೋ ಮಾಡಿದ್ದಕ್ಕೆ ಸಿಕ್ತು ಚಾನ್ಸ್ | Yash Starrer KGF Chapter 2 Editor Ujwal Kulkarni Age Instagram


‘ಕೆಜಿಎಫ್​ 2’ ಎಡಿಟರ್​ ವಯಸ್ಸು ಕೇವಲ 20 ವರ್ಷ; ಫ್ಯಾನ್​ ಮೇಡ್ ವಿಡಿಯೋ ಮಾಡಿದ್ದಕ್ಕೆ ಸಿಕ್ತು ಚಾನ್ಸ್

ಯೂಟ್ಯೂಬ್​ನಲ್ಲಿ (YouTube) ಫ್ಯಾನ್​ ಮೇಡ್​ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಟ್ರೇಲರ್ ರಿಲೀಸ್ ಸಂದರ್ಭದಲ್ಲಿ ಅಭಿಮಾನಿಗಳೇ ಕ್ರಿಯೇಟ್ ಮಾಡಿದ ಹಲವು ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಕೆಲ ವಿಡಿಯೋಗಳು ಟ್ರೇಲರ್​ಗಿಂತಲೂ ಅದ್ಭುತವಾಗಿ ಮೂಡಿ ಬಂದಿರುತ್ತದೆ. ಈ ರೀತಿಯ ವಿಡಿಯೋಗಳನ್ನು ಮಾಡಿ ದೊಡ್ಡದೊಡ್ಡ ಅವಕಾಶ ಸಿಕ್ಕ ಉದಾಹರಣೆ ಕೂಡ ಇದೆ. ಉದಕ್ಕೆ ಉತ್ತಮ ಉದಾಹರಣೆ ಉಜ್ವಲ್ ಕುಲ್ಕರ್ಣಿ(Ujwal Kulkarni) . ‘ಕೆಜಿಎಫ್​ 2’ ಸಿನಿಮಾದಲ್ಲಿ (KGF Chapter 2) ವಿಡಿಯೋ ಎಡಿಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಟೀಂ ಸೇರಿಕೊಳ್ಳುವಾಗ ಅವರಿಗೆ ವಯಸ್ಸು ಕೇವಲ 17 ವರ್ಷ! ಇಷ್ಟು ಚಿಕ್ಕ ವಯಸ್ಸಿಗೆ ‘ಕೆಜಿಎಫ್​ ಚಾಪ್ಟರ್​ 2’ ತಾಂತ್ರಿಕ ವರ್ಗ ಸೇರಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಉಜ್ವಲ್ ಈ ರೀತಿಯ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.

ಕಲೆ ಒಂದಿದ್ದರೆ ಸಾಕು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಇರುವ ಅವಕಾಶದಲ್ಲೇ ದೊಡ್ಡ ಸಾಧನೆ ಮಾಡಬಹುದು. ಉಜ್ವಲ್​ ಕೂಡ ಇದೇ ಸಾಲಿಗೆ ಸೇರುತ್ತಾರೆ. ಅವರು ಮಾಡಿದ ವಿಡಿಯೋ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಷ್ಟವಾಗಿದೆ. ಈ ಕಾರಣಕ್ಕೆ ಉಜ್ವಲ್​ಗೆ ವಿಡಿಯೋ ಎಡಿಟಿಂಗ್ ಮಾಡೋಕೆ ಅವಕಾಶ ನೀಡಿದ್ದಾರೆ.

ಉಜ್ವಲ್ ಅವರು ‘ಕೆಜಿಎಫ್’ ಟ್ರೇಲರ್​ಅನ್ನು ಎಡಿಟ್ ಮಾಡಿ ಫ್ಯಾನ್​ಮೇಡ್ ವಿಡಿಯೋ ರೀತಿಯಲ್ಲಿ ಬಿಟ್ಟಿದ್ದರು. ಈ ವಿಡಿಯೋ ಸಖತ್​ ವೀಕ್ಷಣೆ ಪಡೆದುಕೊಂಡಿತ್ತು. ಇದು ಪ್ರಶಾಂತ್ ನೀಲ್ ಅವರ ಕಣ್ಣಿಗೂ ಬಿದ್ದಿದೆ. ಈ ಯುವಕನ ಕೆಲಸವನ್ನು ಇಷ್ಟಪಟ್ಟು ಕರೆದಿದರು.  ಸಂದರ್ಶನದ ನಂತರಲ್ಲಿ ಉಜ್ವಲ್​ಗೆ ಅವಕಾಶ ನೀಡಿದರು.

‘ಕೆಜಿಎಫ್ 2’ ಅನ್ನೋದು ತುಂಬಾನೇ ದೊಡ್ಡ ಸಿನಿಮಾ. ಈ ಸಿನಿಮಾಗೆ ವಿಶ್ವಮಟ್ಟದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಬೇಕು ಎಂದರೆ ತುಂಬಾನೇ ಅನುಭವ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆ ಕೆಲಸದ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಬೇಕು. ಈ ಸಾಮರ್ಥ್ಯವನ್ನು ಪ್ರಶಾಂತ್ ನೀಲ್ ಅವರು ಉಜ್ವಲ್ ಬಳಿ ಕಂಡರು. ಈ ಕಾರಣಕ್ಕೆ ಅವರಿಗೆ ಅವಕಾಶ ನೀಡಿದರು.

‘ಕೆಜಿಎಫ್​ 2’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಕೆಲವು ಕಡೆಗಳಲ್ಲಿ ಏಪ್ರಿಲ್​ 13ರ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಾಣುತ್ತಿವೆ. ಬೆಂಗಳೂರು ಒಂದರಲ್ಲೇ ನೂರಾರು ಶೋಗಳನ್ನು ಇಡಲಾಗಿದೆ. ಮೊದಲ ದಿನ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

TV9 Kannada


Leave a Reply

Your email address will not be published. Required fields are marked *