ಕೆಜಿಎಫ್​ ಚಾಪ್ಟರ್ 2 ಯಾವಾಗ ರಿಲೀಸ್ ಆಗುತ್ತೆ ಅಂತ ಇಡೀ ಭಾರತೀಯ ಪ್ರೇಕ್ಷಕ ಕುಲ ಕಾಯುತ್ತಿದೆ. ರಾಕಿಭಾಯ್ ರೋಷ, ಅಧೀರನ ಅಬ್ಬರವನ್ನು ಕಣ್ತುಂಬಿ ಕೊಳ್ಳೊಕೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಾಯ್ತಿದ್ದಾರೆ. ಹಾಗಾದ್ರೆ ಯಾವಾಗ ಕೆಜಿಎಫ್ ರಿಲೀಸ್? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

ಚಾಪ್ಟರ್ 2 ಸಿನಿಮಾ ರಿಲೀಸ್​​​..?
ಜುಲೈ 16 ಕ್ಕೆ ಸಿನಿಮಾ ರಿಲೀಸ್ ಅಂತ ಅನೌಸ್​​ಮೆಂಟ್ ಆಗಿತ್ತು. ಅದ್ರೆ, ಕೊರೊನ ಎರಡನೇ ಅಲೆ ನೀಲ್ ಲೆಕ್ಕಚಾರವನ್ನು ತಲೆಕೆಳಗೆ ಮಾಡ್ತು..ಏಪ್ರಿಲ್ 2ನೇವಾರ ಲಾಕ್ಡೌನ್ ಆದ ಕಾರಣ ಕೆಜಿಎಫ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಪೋಸ್ಟ್ ಪೋನ್ ಆಗಿತ್ತು..ಆದ್ರೆ ಈಗ ಆನ್ಲಾಕ್ ಆಗ್ತಿದಂತೆ ನಿರ್ದೇಶಕ ನೀಲ್ ಮತ್ತೆ ಆಕ್ಟೀವ್ ಆಗಿದ್ದಾರೆ. ಅಲ್ಲದೆ ಇಂದಿನಿಂದ ಬಾಕಿ ಉಳಿದಿದ್ದ ಡಬ್ಬಿಂಗ್ ಕೆಲಸವನ್ನು ಶುರು ಮಾಡ್ಕೊಂಡಿದೆ ಚಿತ್ರತಂಡ..

ಇನ್ನು ಕೆಜಿಎಫ್2 ಚಿತ್ರದ ಡಬ್ಬಿಂಗ್ ಶುರುವಾಗ್ತಿದಂತೆ ಕೆಜಿಎಫ್ ಗೌರಿ ಗಣೇಶ ಹಬ್ಬಕ್ಕೆ ರಿಲೀಸ್ ಆಗಲಿದೆಯಂತೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸುಂಟರಗಾಳಿಯಂತೆ ಸುತ್ತುತಿದೆ. ಅದ್ರೆ ಕೆಜಿಎಫ್ ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನು ಚಿತ್ರತಂಡ ಇದುವರೆಗೂ ಎಲ್ಲೂ ಹೇಳಿಲ್ಲ. ಇದಲ್ಲದೆ ಜುಲೈ 16ಕ್ಕೆ ಸಿನಿಮಾ ರಿಲೀಸ್ ಆಗೋದು ಮಾತ್ರ 100% ಡೌಟ್.ಯಾಕಂದ್ರೆ ಕೆಜಿಎಫ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಇನ್ನು ಸಾಕಷ್ಟು ಬಾಕಿ ಇದೆ.

ಇದ್ರ, ಜೊತೆಗೆ ಸರ್ಕಾರ ಥಿಯೇಟರ್​ಗಳ ಒಪನ್ ಮಾಡಲು ಅನುಮತಿಯನ್ನು ನೀಡಿಲ್ಲ.. ಜೊತೆಗೆ 100 ಪರ್ಸೆಂಟ್ ಥಿಯೇಟರ್ ಒಪನ್ ಆಗುವ ತನಕ ಕೆಜಿಎಫ್ 2 ರಿಲೀಸ್ ಆಗಲ್ಲ.ಇದರ ನಡುವೆ ಸೆಪ್ಟೆಂಬರ್​ ಅಂದ್ರೆ ಗಣೇಶ ಹಬ್ಬಕ್ಕೆ ರಾಕಿ ಥಿಯೇಟರ್​ಗೆ ಬರ್ತಾನೆ ಅನ್ನೋ ಮಾತು ಗಾಳಿ ಮಾತಾಗಿದೆ.ಸದ್ಯಕ್ಕೆ ಚಿತ್ರತಂಡ ಕೆಜಿಎಫ್ 2 ರಿಲೀಸ್​ ಡೇಟ್ ಬಗ್ಗೆ ಚಿಂತಿಸಿಲ್ಲ ಎಂಬ ಮಾಹಿತಿಯೂ ನ್ಯೂಸ್​ ಫಸ್ಟ್​​ಗೆ ಲಭ್ಯವಾಗಿದೆ.

The post ಕೆಜಿಎಫ್ 2 ರಿಲೀಸ್ ಯಾವಾಗ? ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ ಕೊಡ್ತಾರಾ ನೀಲ್? appeared first on News First Kannada.

Source: newsfirstlive.com

Source link