‘ಕೆಜಿಎಫ್ 2’ ಸಿನಿಮಾ ನೋಡಿ ಭೇಷ್ ಎಂದ ಅಲ್ಲು ಅರ್ಜುನ್; ಯಶ್ ಪರ್ಫಾರ್ಮೆನ್ಸ್​​ಗೆ ಸ್ಟೈಲಿಶ್ ಸ್ಟಾರ್ ಫಿದಾ | Swagger performance by Yash Says Allu Arjun After watched KGF Chapter 2


‘ಕೆಜಿಎಫ್ 2’ ಸಿನಿಮಾ ನೋಡಿ ಭೇಷ್ ಎಂದ ಅಲ್ಲು ಅರ್ಜುನ್; ಯಶ್ ಪರ್ಫಾರ್ಮೆನ್ಸ್​​ಗೆ ಸ್ಟೈಲಿಶ್ ಸ್ಟಾರ್ ಫಿದಾ

ಅಲ್ಲು ಅರ್ಜುನ್-ಯಶ್

‘ಕೆಜಿಎಫ್ 2’ ಸಿನಿಮಾ (KGF Chapter 2) ಬಗ್ಗೆ ಇಡೀ ವಿಶ್ವ ಮಾತನಾಡುತ್ತಿದೆ. ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಈ ಸಿನಿಮಾ ಹವಾ ಸೃಷ್ಟಿ ಮಾಡಿದೆ. ಚಿತ್ರದ ಕಲೆಕ್ಷನ್ ಸದ್ಯದಮಟ್ಟಿಗಂತೂ ತಗ್ಗುವ ಸೂಚನೆ ಸಿಗುತ್ತಿಲ್ಲ. ಆ ಮಟ್ಟಿಗೆ ಜನರು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ‘ಕೆಜಿಎಫ್ 2’ ಚಿತ್ರವನ್ನು ನೋಡಿದ ಪರಭಾಷೆಯ ಸ್ಟಾರ್​​ಗಳು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈಗ ನಟ ಅಲ್ಲು ಅರ್ಜುನ್ ಅವರು (Allu Arjun) ‘ಕೆಜಿಎಫ್ 2’ಗೆ ಭೇಷ್ ಎಂದಿದ್ದಾರೆ. ಯಶ್ (Yash) ಪರ್ಫಾರ್ಮೆನ್ಸ್ ನೋಡಿ ಫಿದಾ ಆಗಿದ್ದಾರೆ.

ಅಲ್ಲು ಅರ್ಜುನ್ ಅವರು ಮೊದಲಿನಿಂದಲೂ ಒಂದು ಪದ್ದತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಒಂದೊಳ್ಳೆಯ ಸಿನಿಮಾ ನೋಡಿದರೆ ಅವರು ಆ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಚಿತ್ರತಂಡಕ್ಕೆ ಬೆಂಬಲ ನೀಡುತ್ತಾರೆ. ಈ ಬಾರಿ ಅವರು ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ್ದಾರೆ. ಈ ಸಿನಿಮಾಗೆ ಅವರು ಭೇಷ್ ಎಂದಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಅಲ್ಲು ಅರ್ಜುನ್ ಅವರು ಬರೆದುಕೊಂಡಿದ್ದಾರೆ.

‘ಕೆಜಿಎಫ್ 2’ ತಂಡಕ್ಕೆ ಶುಭಾಶಯ. ಯಶ್ ಅವರ ಪರ್ಫಾರ್ಮೆನ್ಸ್​ ಅದ್ಭುತವಾಗಿದೆ. ಸಂಜಯ್ ದತ್​ ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ ಹಾಗೂ ಎಲ್ಲಾ ಕಲಾವಿದರ ನಟನೆ ಉತ್ತಮವಾಗಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಭುವನ್ ಗೌಡ ಅವರ ಛಾಯಾಗ್ರಹಣ ಔಟ್​ಸ್ಟ್ಯಾಂಡಿಂಗ್. ಎಲ್ಲಾ ತಂತ್ರಜ್ಞರಿಗೆ ನನ್ನ ಗೌರವ’ ಎಂದು ಬರೆದುಕೊಂಡಿದ್ದಾರೆ ಅಲ್ಲು ಅರ್ಜುನ್.

ಪ್ರಶಾಂತ್ ನೀಲ್ ಅವರ ನಿರ್ದೇಶನ ‘ಕೆಜಿಎಫ್ 2’ನ ಹೈಲೈಟ್. ಈ ಬಗ್ಗೆಯೂ ಬರೆದುಕೊಂಡಿದ್ದಾರೆ ಅಲ್ಲು ಅರ್ಜುನ್. ‘ಪ್ರಶಾಂತ್ ನೀಲ್ ಅವರದ್ದು ಅದ್ಭುತ ಪ್ರದರ್ಶನ. ಅವರ ಆಲೋಚನೆಗೆ ನನ್ನದೊಂದು ಗೌರವ. ಭಾರತದ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ ಅಲ್ಲು ಅರ್ಜುನ್. ಈ ಟ್ವೀಟ್​ಗೆ ಸಾಕಷ್ಟು ಲೈಕ್ಸ್​ಗಳು ಬಂದಿವೆ.

TV9 Kannada


Leave a Reply

Your email address will not be published.