‘ಕೆಜಿಎಫ್​ 3ನೇ ಪಾರ್ಟ್​ ಬರಲಿದೆ’: ಭವಿಷ್ಯ ನುಡಿದ ಪ್ರೇಕ್ಷಕರು; ಯಶ್​ ಫ್ಯಾನ್ಸ್​ ಹೀಗೆ ಹೇಳ್ತಿರೋದು ಏಕೆ? | Rocking Star Yash Fans expecting KGF Chapter 3 after watching KGF Chapter 2


‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ನೋಡಿದ ಪ್ರೇಕ್ಷಕರು ಫುಲ್​ ಖುಷ್​ ಆಗಿದ್ದಾರೆ. ಕೊಟ್ಟ ಕಾಸಿಗೆ ಮೋಸವಿಲ್ಲ ಎಂದು ತೃಪ್ತರಾಗಿದ್ದಾರೆ. ಈ ರೀತಿಯ ಸೂಪರ್​ ಹಿಟ್​ ಸಿನಿಮಾ ನೀಡಿದ್ದಕ್ಕಾಗಿ ‘ಕೆಜಿಎಫ್​ 2’ ತಂಡಕ್ಕೆ ಜನರು ಭೇಷ್​ ಎನ್ನುತ್ತಿದ್ದಾರೆ. ಈ ನಡುವೆ ‘ಕೆಜಿಎಫ್​: ಚಾಪ್ಟರ್​ 3’ (KGF Chapter 3) ಕೂಡ ಬರಲಿದೆ ಎಂದು ಜನರೇ ಭವಿಷ್ಯ ನುಡಿಯುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ‘ಕೆಜಿಎಫ್​ 2’ ಕಥೆಯಲ್ಲಿ ಸೀಕ್ವೆಲ್​ ಬಗ್ಗೆ ಸಣ್ಣ ಹಿಂಟ್​ ನೀಡಲಾಗಿದೆ. ಹಾಗಾಗಿ ಕೆಜಿಎಫ್​ 3ನೇ ಪಾರ್ಟ್​ (KGF 3) ಬರೋದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ದೇಶಾದ್ಯಂತ ಇರುವ ಯಶ್​ ಅಭಿಮಾನಿಗಳು ಮೊದಲ ದಿನವೇ ಮುಗಿಬಿದ್ದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನೋಡಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ಈ ಮೊದಲಿನ ಎಲ್ಲ ದಾಖಲೆಗಳನ್ನು ಮುರಿಯುವ ಸೂಚನೆ ಸಿಕ್ಕಿದೆ.

TV9 Kannada


Leave a Reply

Your email address will not be published.