ಕೆನಡಾದ ಪಾರ್ಲಿಮೆಂಟ್​ನಲ್ಲಿ ಮೊಳಗಿದ ಕನ್ನಡ ಭಾಷೆ: ಕನ್ನಡದಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ | Chandra Arya is the MP who spoke in Kannada at the Canada Parliament


ಕೆನಡಾದ ಪಾರ್ಲಿಮೆಂಟ್​ನಲ್ಲಿ ಮೊಳಗಿದ ಕನ್ನಡ ಭಾಷೆ: ಕನ್ನಡದಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ

ಕೆನಡಾ ಪಾರ್ಲಿಮೆಂಟ್ ಸಂಸದ ಚಂದ್ರ ಆರ್ಯ

ಈ ಮೂಲಕ ಕೆನಡಾದ ಪಾರ್ಲಿಮೆಂಟ್​ನಲ್ಲಿ ಕನ್ನಡದ ಕಹಳೆ ಮೊಳಗಿದೆ. ಈ ಸುಂದರ ಭಾಷೆಗೆ ಸುದೀರ್ಘ ಇತಿಹಾಸ ಇದೆ. ಕನ್ನಡ ಭಾಷೆಯನ್ನು‌ 5 ಕೋಟಿ ಜನರು ಮಾತನಾಡುತ್ತಾರೆ ಎಂದು ಅವರು ಹೇಳಿದರು.

ಕೆನಡಾ: ನಾನು‌ ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಕೆನಡಾ ಪಾರ್ಲಿಮೆಂಟ್​ನಲ್ಲಿ ಸಂಸದ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿದ್ದಾರೆ. ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ, ಇದೇ ಮೊದಲ‌ ಬಾರಿಗೆ ವಿದೇಶಿ ಪಾರ್ಲಿಮೆಂಟ್​ನಲ್ಲಿ ‌ಕನ್ನಡದಲ್ಲಿ‌ ಭಾಷಣ ಮಾಡಿದರು. ಈ ಮೂಲಕ ಕೆನಡಾದ ಪಾರ್ಲಿಮೆಂಟ್​ನಲ್ಲಿ ಕನ್ನಡದ ಕಹಳೆ ಮೊಳಗಿದೆ. ಈ ಸುಂದರ ಭಾಷೆಗೆ ಸುದೀರ್ಘ ಇತಿಹಾಸ ಇದೆ. ಕನ್ನಡ ಭಾಷೆಯನ್ನು‌ 5 ಕೋಟಿ ಜನರು ಮಾತನಾಡುತ್ತಾರೆ ಎಂದು ಅವರು ಹೇಳಿದರು. ಕುವೆಂಪು ರಚನೆಯ ಮತ್ತು ಡಾ. ರಾಜಕುಮಾರ ಹಾಡಿರುವ ಭಾವಗೀತೆಯಾದ ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಕೆನಡಾ ಸಂಸತ್​ನಲ್ಲಿ ಚಂದ್ರ ಆರ್ಯ ಹೇಳುವ ಮೂಲಕ ತಮ್ಮ ಭಾಷಣವನ್ನು ಮುಗಿಸಿದರು. ಚಂದ್ರ ಆರ್ಯ, ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದವರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *