ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದ ಚಂದ್ರ ಆರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಎಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಭಾಗ್ಯವತಿ ಅಮರೇಶ್ | Bhagyawati amaresh wrote letter and request cm bommai to give kannada rajyotsava award to Chandra Arya


ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದ ಚಂದ್ರ ಆರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಎಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಭಾಗ್ಯವತಿ ಅಮರೇಶ್

ಭಾಗ್ಯವತಿ ಅಮರೇಶ್, ಚಂದ್ರ ಆರ್ಯ

ಕೆನಡ ದೇಶದ ಸಂಸದ ಚಂದ್ರಕಾಂತ್ ಆರ್ಯರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾದ ಭಾಗ್ಯವತಿ ಅಮರೇಶ್ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪುತ್ರ ಕೆನಡಾದ ಸಂಸದ ಚಂದ್ರ ಆರ್ಯ(Chandra Arya) ಅವರು ಕೆನಡಾದ ಪಾರ್ಲಿಮೆಂಟ್ ಭವನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದಿದ್ದಾರೆ. ಅವರು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ರಾಜ್ಯದಲ್ಲಿ ಫುಲ್ ವೈರಲ್ ಆಗಿತ್ತು. ಕನ್ನಡಿಗರೆಲ್ಲರೂ ಅವರ ಭಾಷಾ ಪ್ರೇಮವನ್ನು ಕೊಂಡಾಡಿದರು. ಸದ್ಯ ಈಗ ಕೆನಡ ದೇಶದ ಸಂಸದ ಚಂದ್ರ ಆರ್ಯರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(Kannada Rajyotsava Award) ನೀಡಿ ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ(Basavaraj Bommai) ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾದ ಭಾಗ್ಯವತಿ ಅಮರೇಶ್(Bhagyawati Amaresh) ಮನವಿ ಪತ್ರ ಸಲ್ಲಿಸಿದ್ದಾರೆ.

ಕರ್ನಾಟಕದ ಹೆಮ್ಮೆಯ ಪುತ್ರ ಕೆನಡ ದೇಶದ ಸಂಸದ ಚಂದ್ರ ಆರ್ಯ ರವರು ಕೆನಡ ಪಾರ್ಲಿಮೆಂಟ್ ಭವನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಕನ್ನಡ ಭಾಷೆಯನ್ನು ಬಳಸುವ ಮುಖಾಂತರ ಇಡೀ ಕರ್ನಾಟಕ ಮತ್ತು ಭಾರತದ ಗಮನ ಸೆಳೆದ್ದಿದ್ದಾರೆ. ಶ್ರೀಮಾನ್ ಚಂದ್ರ ಆರ್ಯ ರವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಮುಖದಲ್ಲಿದ್ದ ಆನಂದ ವರ್ಣಿಸಲು ಅಸಾಧ್ಯ. ಹೃದಯ ಪೂರ್ವಕವಾಗಿ ತನ್ನ ಮಾತೃ ಭಾಷೆಯನ್ನು ತಾನು ಹುಟ್ಟಿದ ರಾಜ್ಯ, ಜಿಲ್ಲೆ ಮತ್ತು ಊರನ್ನು ಹೇಳುತ್ತಾ ಜೊತೆಗೆ ರಾಷ್ಟ್ರಕವಿ ಕುವೆಂಪು ರವರನ್ನು ಮತ್ತು ವರನಟ ಡಾ. ರಾಜಕುಮಾರ್ ರವರನ್ನು ನೆನೆಸಿಕೊಂಡು ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಭಾಷೆ ಮತ್ತು ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.

TV9 Kannada


Leave a Reply

Your email address will not be published. Required fields are marked *