ಕೆರೆಗೆ ರಾಸಾಯನಿಕ ನೀರು ಮಿಶ್ರಣ; ಸಾವಿರಾರು ಮೀನುಗಳ ಮಾರಣಹೋಮ | Mixing chemical water into the lake; death thousands of fish


ಜಲಚರಗಳ ಸಾವಿಗೆ ಬಣ್ಣದ ಕಾರ್ಖಾನೆಗಳ ಕೆಮಿಕಲ್ ಮಿಶ್ರಿತ ನೀರು ಕಾರಣ ಅಂತ‌ ಆರೋಪ ಮಾಡಲಾಗುತ್ತಿದೆ. ಬಿಲವಾರದಹಳ್ಳಿ, ಶಾನುಭೋಗನಹಳ್ಳಿ, ಕೆಂಚಿಗನಹಳ್ಳಿ ಪ್ರದೇಶದಲ್ಲಿ ಬಣ್ಣದ ಕಾರ್ಖಾನೆಗಳಿವೆ.

ಕೆರೆಗೆ ರಾಸಾಯನಿಕ ನೀರು ಮಿಶ್ರಣ; ಸಾವಿರಾರು ಮೀನುಗಳ ಮಾರಣಹೋಮ

ವಿಷಯುಕ್ತ ನೀರಿನಿಂದ ಮೀನುಗಳ ಸಾವು

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 19, 2022 | 2:38 PM
ಆನೇಕಲ್: ಕೆರೆಯಲ್ಲಿ ರಾಸಾಯನಿಕ ನೀರು ಮಿಶ್ರಣದಿಂದಾಗಿ ಸಾವಿರಾರು ಮೀನುಗಳ ಮಾರಣಹೋಮ ನಡೆದಿರುವಂತಹ ಘಟನೆ ಬನ್ನೇರುಘಟ್ಟ ಪಂಚಾಯತಯ ಬ್ಯಾಟರಾಯನದೊಡ್ಡಿ ಕೆರೆಯಲ್ಲಿ ನಡೆದಿದೆ. ಜಲಚರಗಳ ಸಾವಿಗೆ ಬಣ್ಣದ ಕಾರ್ಖಾನೆಗಳ ಕೆಮಿಕಲ್ ಮಿಶ್ರಿತ ನೀರು ಕಾರಣ ಅಂತ‌ ಆರೋಪ ಮಾಡಲಾಗುತ್ತಿದೆ. ಬಿಲವಾರದಹಳ್ಳಿ, ಶಾನುಭೋಗನಹಳ್ಳಿ, ಕೆಂಚಿಗನಹಳ್ಳಿ ಪ್ರದೇಶದಲ್ಲಿ ಬಣ್ಣದ ಕಾರ್ಖಾನೆಗಳಿವೆ. ತಮಿಳುನಾಡಿನಲ್ಲಿ ಸಂಪೂರ್ಣ ಬಣ್ಣದ ಕಾರ್ಖಾನೆಗಳನ್ನು ನಿಷೇಧಿಸಲಾಗಿದೆ. ಬಣ್ಣ ಕಟ್ಟಿದ ಬಳಿಕ ಕೆಮಿಕಲ್ ಮಿಶ್ರಿತ ನೀರು ಹೊರ ಬಿಡಲಾಗುತ್ತದೆ. ಕೆಮಿಕಲ್ ಮಿಶ್ರಿತ ನೀರು ಕೆರೆಗೆ ಸೇರಿ ಮೀನುಗಳು ಸಾವನ್ನಪ್ಪಿವೆ. ಸಾಲಸೋಲ ಮಾಡಿ ಮೀನುಗಳನ್ನು ಸಾಕಾಣಿಕೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಕ್ರಮ ಕೈಗೊಳ್ಳದ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.