ದಾವಣಗೆರೆ: ಬೈಕ್ನಲ್ಲಿ ಹೋಗುವಾಗ ಗೋಡೆ ಕುಸಿದು ಯುವಕರಿಬ್ಬರು ಗಾಯಗೊಂಡ ಘಟನೆ ಜಿಲ್ಲೆಯ ಐಗೂರು ಗ್ರಾಮದಲ್ಲಿ ವರದಿಯಾಗಿದೆ.
ಬೆಳಿಗ್ಗೆ ಕೆರೆಗೆ ಕೋಡಿ ಬಿದ್ದಿದ್ದನ್ನ ನೋಡಲು ಹೊರಟಿದ್ದ ದರ್ಶನ್, ನವೀನ್ ಎಂಬ ಇಬ್ಬರು ಯುವಕ ಮೇಲೆ ಸತ ಮಳೆಯಿಂದ ನೆನೆದಿದ್ದ ಹಳೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲ್ಲವಾದರು ಯುವಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಗಾಯಗೊಂಡ ಯುವಕರನ್ನು ಸದ್ಯ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.