ಬೆಂಗಳೂರು: ಕೇವಲ 6-8 ವಾರಗಳಲ್ಲಿ ಕೊರೊನಾದ 3ನೇ ಅಲೆ ದೇಶದಲ್ಲಿ ಉಲ್ಬಣಗೊಳ್ಳಲಿದೆ ಅಂತಾ ಏಮ್ಸ್​ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಎಚ್ಚರಿಕೆಯನ್ನ ನೀಡಿದ್ದಾರೆ. ಮೊದಲನೇ ಅಲೆಯಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಎರಡನೇ ಅಲೆಯು ಭಯಂಕರವಾಗಿ ಕಾಡಿದ ಪರಿಣಾಮ ದೊಡ್ಡ ಹೊಡೆತವನ್ನೇ ನೀಡಿದೆ. ಇದೀಗ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯನ್ನ ನೀಡಿದ್ದು, ಜನರು ಈ ಕೂಡಲೇ ಜಾಗೃತರಾಗಲೇಬೇಕಿದೆ.

2020 ಜನವರಿ 27 ರಂದು ಕೇರಳದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅಲ್ಲಿಂದ ಇವತ್ತಿನವರೆಗೆ ದೇಶದಲ್ಲಿ ಒಟ್ಟು 2,98,81,965 ಮಂದಿಯನ್ನ ಕೊರೊನಾ ಕಾಡಿದೆ. 2020 ರಿಂದ ಶುರುವಾದ ಕೊರೊನಾ, ತನ್ನ ಎರಡು ಅಲೆಗಳ ಮೂಲಕ ದೇಶವನ್ನ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಇದೀಗ ತಜ್ಞರು ಮೂರನೇ ಅಲೆಯ ಎಚ್ಚರಿಕೆಯನ್ನ ನೀಡಿದ್ದಾರೆ.

ಅಂದ್ಹಾಗೆ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾದ ಮೂರನೇ ಅಲೆಯ ತಾಂಡವ ಬ್ರೆಝಿಲ್, ಆಫ್ರಿಕನ್ ರಾಷ್ಟ್ರಗಳಲ್ಲಿ ಶುರುವಾಗಿದೆ. 7ನೇ ಅಲೆ ಬಳಿಕ ಅಮೆರಿಕಾದಲ್ಲಿ ಸೋಂಕಿನ ಪ್ರಮಾಣ ತಗ್ಗಿದೆ. ಇಟಲಿಯಲ್ಲಿ 3ನೇ ಅಲೆ, ಜಪಾನ್ನಲ್ಲಿ 4ನೇ ಅಲೆ ತುಂಬಾ ಭೀಕರವಾಗಿದೆ ಅಂತಾ ವರದಿಯಾಗಿದೆ. ಆದರೆ ಇಂಗ್ಲೆಂಡ್, ಅಮೆರಿಕಾ, ಇಸ್ರೇಲ್, ಫ್ರಾನ್ಸ್, ನ್ಯೂಜಿಲೆಂಡ್, ಕೆನಡಾ ಮುಂತಾದ ರಾಷ್ಟ್ರಗಳಲ್ಲಿ ಕೊರೊನಾ ಕಂಟ್ರೋಲ್​ಗೆ ಬಂದಿದೆ.

ಹೀಗಾಗಿ ಭಾರತಕ್ಕೆ 3ನೇ ಅಲೆ ಬಾರದಂತೆ ತಡೆಯಲು ನಾವು ತ್ವರಿತ ಕ್ರಮಗಳನ್ನ ಅಗತ್ಯವಾಗಿ ತೆಗೆದುಕೊಳ್ಳಬೇಕಿದೆ. ಇದಕ್ಕೆ ಸರ್ಕಾರ ಏನು ಮಾಡಬೇಕು? ಜನರು ಏನು ಮಾಡಬೇಕು? ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳ ಪಾತ್ರವೂ ಅತಿ ಮುಖ್ಯವಾಗಿದೆ.

ಸರ್ಕಾರಗಳು ಏನು ಮಾಡಬಹುದು?

 • ಏಕಾಏಕಿ ಲಾಕ್​ಡೌನ್​ ತೆರವು ಮಾಡಿ ಸುಮ್ಮನಾಗದೆ ಎಲ್ಲರಿಗೂ ಲಸಿಕೆ ಕೊಡಿಸಬೇಕು
 • ಲಸಿಕೆ ಕೊಡುವುದು ಸರ್ಕಾರದ ಪ್ರಮುಖ ಆದ್ಯತೆ ಆದಲ್ಲಿ ಬಹಳ ಒಳ್ಳೆಯದು
 • ಮಹಾನಗರಗಳಲ್ಲಿ ವಾರ್ಡ್​ ಮಟ್ಟದ ಕೋವಿಡ್​ -19 ಕೇರ್​ ಸೆಂಟರ್​ ನಿರ್ಮಾಣ
 • ಆದ್ಯತೆ ಮೇರೆಗೆ ಆಕ್ಸಿಜನ್​ ಘಟಕಗಳನ್ನೂ ಮುಂಜಾಗ್ರತೆಯಾಗಿ ನಿರ್ಮಿಸಬಹುದು
 • ಹೋಮ್​ ಐಸೋಲೇಷನ್​ನಲ್ಲಿರುವ ಸೋಂಕಿತರಿಗೆ ಸೂಕ್ತ ಔಷಧೋಪಕರಣ ವ್ಯವಸ್ಥೆ
 • ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಪಾಲಿಸುವಂತೆ ಸೂಚಿಸಬೇಕು
 • ಮುಂದಿನ 6 ತಿಂಗಳು ಎಲ್ಲೂ ಜನರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಬಾರದು
 • ಪ್ರವಾಸೋದ್ಯಮ, ತೀರ್ಥಕ್ಷೇತ್ರ, ಜಾತ್ರೆ , ಸಭೆ ಸಮಾರಂಭಕ್ಕೆ ಅವಕಾಶ ನೀಡಬಾರದು
 • ಸಾಧ್ಯವಾದಷ್ಟು ಹೊರ ದೇಶ, ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ
 • ಮೊಬೈಲ್​ ಕೋವಿಡ್​ ಪರೀಕ್ಷಾ ಕೇಂದ್ರಗಳನ್ನು ತೆರೆದು ಪರೀಕ್ಷೆಗಳನ್ನು ಮಾಡಬಹುದು
 • ಮಕ್ಕಳಿಗೆ ಮೂರನೇ ಅಲೆಯ ಸೋಂಕು ತಗುಲಬಹುದು ಎಂಬ ಆತಂಕ ಮನೆಮಾಡಿದೆ
 • ಹೀಗಾಗಿ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು

ಸಂಘ-ಸಂಸ್ಥೆಗಳ ಪಾತ್ರವೇನು..?

 • ಪ್ರಜಾಪ್ರಭುತ್ವದಲ್ಲಿ ಸಂಘ ಸಂಸ್ಥೆಗಳ ಪಾತ್ರ ಅತಿ ಮುಖ್ಯ
 • ಸರ್ಕಾರ ಹೇಳಿದ್ದನ್ನು ಕೇಳದ ಜನ ತಮ್ಮ ನಾಯಕರು ಹೇಳಿದ್ದನ್ನು ಕೇಳ್ತಾರೆ
 • ಹೀಗಾಗಿ ಕೊರೊನಾ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು
 • ಉದಾಸೀನ ಮಾಡದೇ ಇರುವ ಹಾಗೆ ಜನರಿಗೆ ತಿಳವಳಿಕೆ ಮೂಡಿಸಬೇಕು
 • ವ್ಯಾಕ್ಸಿನ್, ಮಾಸ್ಕ್, ಸ್ಯಾನಿಟೈಜೇಶನ್ ಕುರಿತು ಎಲ್ಲದರ ಬಗ್ಗೆ ಮಾಹಿತಿ ನೀಡಬೇಕು
 • ಹಲವರು ತಮ್ಮ ಧರ್ಮದ ಅಥವಾ ನಂಬಿಕೆಯಿಂದಾಗಿ ವ್ಯಾಕ್ಸಿನ್ ಪಡೆಯಲ್ಲ
 • ಅವರಲ್ಲಿ ವ್ಯಾಕ್ಸಿನ್ ಬಗ್ಗೆ ಇರೋ ತಪ್ಪು ಕಲ್ಪನೆ ಹೋಗಲಾಡಿಸಬೇಕು..

The post ಕೆಲವೇ ವಾರಗಳಲ್ಲಿ ತಜ್ಞರಿಂದ 3ನೇ ಅಲೆಯ ಎಚ್ಚರಿಕೆ; ಸರ್ಕಾರ ಹೇಗೆ ಜಾಗೃತವಾಗಬೇಕು..? appeared first on News First Kannada.

Source: newsfirstlive.com

Source link