ಬೆಂಗಳೂರು: ತಾವು ಪೊಲೀಸರೆಂದು ಹೇಳಿಕೊಂಡು ಖದೀಮರ ಗ್ಯಾಂಗ್​ವೊಂದು ಬೈಕ್ ಕಳ್ಳತನ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೆಂಗೇರಿ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಶರತ್ ಶೆಟ್ಟಿ, ಪೂರ್ವಿಕ್ ರಾಜ್, ಮೋಹನ್ ಕುಮಾರ್ ಹಾಗೂ ತಪಸ್ ರಾಯ್ ಬಂಧಿತರು. ಈ ಖದೀಮರು ನಾವು ಪೊಲೀಸರು ಎಂದು ಹೇಳಿಕೊಂಡು ಲಾಕ್​ಡೌನ್ ವೇಳೆ ವಾಹನ ತಪಾಸಣೆ ಮಾಡೋರ ರೀತಿ ಬಂದು ಬೈಕ್ ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಮಾಲೀಕನ ರಾಬರಿಗೆ ಕೆಲಸಗಾರನಿಂದಲೇ ಸ್ಕೆಚ್
ಆರೋಪಿಗಳು ಕೊಮ್ಮಘಟ್ಟ ಬಳಿ, ನಾವು ಪೊಲೀಸರು.. ಲಾಕ್​​ಡೌನಲ್ಲಿ ಯಾಕೆ ಓಡಾಡ್ತಿರಿ ಎಂದು ಅವಾಜ್ ಹಾಕಿ, ವ್ಯಕ್ತಿಯೊಬ್ಬರಿಂದ ಬೈಕ್ ಕದ್ದಿದ್ದಾರೆ. ಬಳಿಕ ಆ ಗಾಡಿಯಲ್ಲಿದ್ದ ವಿವೋ ಫೋನ್ ಹಾಗೂ ಎಟಿಎಂ ಕಾರ್ಡ್ ಕೂಡ ದೋಚಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ದೂರುದಾರನ ಅಕೌಂಟ್​ನಿಂದ 94 ಸಾವಿರ ರೂಪಾಯಿ ಹಣವನ್ನ ಟ್ರಾನ್ಸ್​ಫರ್ ಮಾಡಿಕೊಂಡಿದ್ದರು ಅಂತ ಆರೋಪಿಸಲಾಗಿದೆ. ಅಂದ್ಹಾಗೆ ಆರೋಪಿಗಳಲ್ಲಿ ಒಬ್ಬನಾದ ತಪಸ್ ರಾಯ್ ದೂರುದಾರನ ಬಳಿಯೇ ಕೆಲಸ ಮಾಡಿಕೊಂಡಿದ್ದ. ಮಾಲೀಕ ಬಹಳ ದಿನಗಳಿಂದ ಸಂಬಳ ಕೊಡುತ್ತಿರಲಿಲ್ಲವೆಂದು ಆತನನ್ನು ರಾಬರಿ ಮಾಡಿ‌ ಹಣ ದೋಚಿ ಎಂದು ತನ್ನ ಸಹಚರರಿಗೆ ಸೂಚಿಸಿದ್ದ ಅಂತ ತಿಳಿದುಬಂದಿದೆ.

ಇದಕ್ಕಾಗಿ ಮೂವರನ್ನ ತಯಾರು ಮಾಡಿ ತಾನೇ ಸ್ಪಾಟ್ ಫಿಕ್ಸ್ ಮಾಡಿದ್ದ ತಪಸ್ ರಾಯ್. ನಂತರ ತಾನೂ‌ ಮಾಲೀಕನ ಜೊತೆ ಗಾಡಿಯಲ್ಲಿ ಬರುತ್ತಿದ್ದ. ಈ ವೇಳೆ ಕೊಮ್ಮಘಟ್ಟ ಬಳಿ ಇದ್ದ ಗ್ಯಾಂಗ್ ಇವರನ್ನ ಅಡ್ಡಗಟ್ಟಿ ಬೈಕ್ ದೋಚಿದ್ದಾರೆ ಎನ್ನಲಾಗಿದೆ. ಬಂಧಿತರಿಂದ 41 ಸಾವಿರ ರೂ‌ಪಾಯಿ ನಗದು ಹಾಗೂ ಮೂರು ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

 

The post ಕೆಲಸಗಾರನಿಂದ್ಲೇ ಮಾಲೀಕನ ರಾಬರಿಗೆ ಸ್ಕೆಚ್​: ಪೊಲೀಸರೆಂದು ಹೇಳಿ ಬೈಕ್ ಕದ್ದರು appeared first on News First Kannada.

Source: newsfirstlive.com

Source link