ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನರ್ಸ್ ಮತ್ತು ವೈದ್ಯರಿಗೆ ಕೊರೊನಾ ಕಂಟಕ ತಂದಿದೆ. ಒಂದು ಕಡೆ ಹೆಚ್ಚಿನ ಆರೋಗ್ಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬರ್ತಿದ್ರೆ, ಇನ್ನೊಂದು ಕಡೆ ಕೆಲಸದ ಅತಿಯಾದ ಒತ್ತಡ.

ದೆಹಲಿಯೊಂದರಲ್ಲೆ 650ಕ್ಕೂ ಹೆಚ್ಚು ನರ್ಸ್ ಮತ್ತು ವೈದ್ಯರಿಗೆ ಕೊರೊನಾ ಸೊಂಕು ತಗುಲಿರೋದು ದೃಢಪಟ್ಟಿದೆ. ರಾಮ್ ಮನೋಹರ್ ಲೋಹಿಯಾ ಮತ್ತು ಏಮ್ಸ್ ಅಸ್ಪತ್ರೆಯಲ್ಲೆ ಹೆಚ್ಚು ಸೊಂಕು ಪತ್ತೆಯಾಗಿದೆ. ಇದರಿಂದ ವೈದ್ಯರು ಮತ್ತು ನರ್ಸ್​ಗಳ ಕೊರತೆ ಕಾಣುತ್ತಿದೆ. ತುಂಬಾ ಜನ 14 ರಿಂದ 17 ಗಂಟೆ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಇವರೆಲ್ಲ ಮಾನಸಿಕವಾಗಿ ಕುಗ್ಗಿಹೊಗುತ್ತಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳುತ್ತಿದೆ.

RML ಆಸ್ಪತ್ರೆಯಲ್ಲಿ 800 ಜನ ಕೆಲಸ ಮಾಡುತ್ತಾರೆ, ಅದರಲ್ಲಿ 210 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ದೆಹಲಿ ಸರ್ಕಾರಕ್ಕೆ ತಲೆ ಬಿಸಿ ತಂದಿದೆ.

The post ಕೆಲಸದ ಒತ್ತಡದ ಜೊತೆ ವೈರಸ್​ ಕಂಟಕ: ದೆಹಲಿಯ 650ಕ್ಕೂ ಹೆಚ್ಚು ವೈದ್ಯರು-ನರ್ಸ್​ಗಳಿಗೆ ಸೋಂಕು appeared first on News First Kannada.

Source: newsfirstlive.com

Source link