ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ! ಸಿಸಿಬಿ ಪೊಲೀಸರಿಂದ ಆರೋಪಿ ಅರೆಸ್ಟ್ | Ccb police has arrested Fraud accused raghavendra


ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ! ಸಿಸಿಬಿ ಪೊಲೀಸರಿಂದ ಆರೋಪಿ ಅರೆಸ್ಟ್

ಬಂಧಿತ ಆರೋಪಿ ರಾಘವೇಂದ್ರ

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ರಾಜ್ಯದಲ್ಲಿ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದಾರೆ.ಆರೋಪಿ ಕೇಂದ್ರ ಸರ್ಕಾರಿ ನೌಕರನೆಂದು ಹೇಳಿಕೊಂಡು ವಂಚಿಸುತ್ತಿದ್ದ. ಹಲವರಿಗೆ ವಂಚಿಸಿ ಕೋಟ್ಯಂತರ ಹಣ ಮಾಡಿದ್ದಾನೆ. ಸ್ವಂತ ಊರಿನಲ್ಲಿ ಒಂದು ಮನೆ, ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಫ್ಲ್ಯಾಟ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹೊಂದಿದ್ದಾನೆ. ಓಡಾಡುವುದಕ್ಕೆ 2 ಕಾರು ಕೂಡಾ ಖರೀದಿ ಮಾಡಿದ್ದಾನೆ.

ಬಂಧಿತ ರಾಘವೇಂದ್ರನ ಬಳಿಯಿದ್ದ ಫೋನ್, ಲ್ಯಾಪ್​ಟ್ಯಾಪ್​, ಟ್ಯಾಬ್, ಚೆಕ್​ಗಳು, ಬಾಂಡ್ ಪೇಪರ್, ಆಸ್ತಿ ಪತ್ರಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ರಾಘವೇಂದ್ರ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಯಶವಂತಪುರ, ಬನವಾಸಿ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ರಾಘವೇಂದ್ರ ವಿರುದ್ಧ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಈತ ಕೆಲಸ ಕೊಡಿಸುವುದಾಗಿ ಬಾಂಡ್ ಪೇಪರ್, ಚೆಕ್ ಪಡೆಯುತ್ತಿದ್ದ. ಖಾಲಿ ಚೆಕ್​ಗಳ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ. ವಂಚನೆಗೊಳಗಾದವರು ಹಣ ವಾಪಸ್ ಕೇಳಿದರೆ ಧಮ್ಕಿ ಹಾಕುತ್ತಿದ್ದ. ಸಹಿ ಹಾಕಿದ್ದ ಬಾಂಡ್ ಪೇಪರ್ ತೋರಿಸಿ ಬೆದರಿಕೆ ಹಾಕುತ್ತಿದ್ದ. ಹಣ ನೀಡಿದ್ದವರ ವಿರುದ್ಧ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಕುಂದಾಪುರದಲ್ಲಿ ಖಾಸಗಿಯಾಗಿ ಸರ್ವೆ ಕೆಲಸ ಮಾಡುತ್ತಿದ್ದ. ಆ ಬಳಿಕ ಹೆಚ್ಚಿನ ಹಣಕ್ಕಾಗಿ ವಂಚನೆಗೆ ಇಳಿದಿದ್ದ.

ವಂಚಕ ರಾಘವೇಂದ್ರ ಬೆಂಗಳೂರು, ಉಡುಪಿ ಜಿಲ್ಲೆ ಕುಂದಾಪುರ, ಬಾಗಲಕೋಟೆ, ಹಾವೇರಿಯಲ್ಲಿ ತಲಾ ಒಂದೊಂದು ಮದುವೆಯಾಗಿದ್ದಾನೆ. ಒಟ್ಟು ನಾಲ್ಕು ಮದುವೆಯಾಗಿರುವ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ

ಕಾಡುಹಂದಿ ಊರೊಳಗೆ ಬಂದು ಕಾರು ಶೋರೂಮ್ ಸಿಬ್ಬಂದಿ ಮೇಲೆ ಅಟ್ಟಾಡಿಸಿ ಹಲ್ಲೆ ಮಾಡಿದ್ದು ಮಂಗಳೂರಿನಲ್ಲಿ ಮಾರಾಯ್ರೇ!

ಸೋನಾಕ್ಷಿ ಸಿನ್ಹಾಗೆ ಕೈಕೊಡುತ್ತಲೇ ಇದೆ ಅದೃಷ್ಟ; ಸಿನಿಮಾವನ್ನೇ ಅರ್ಧಕ್ಕೆ ಕೈಬಿಟ್ಟ ನೆಟ್​​ಫ್ಲಿಕ್ಸ್

TV9 Kannada


Leave a Reply

Your email address will not be published. Required fields are marked *