ಕೆಲ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಸದ್ಯದಲ್ಲೇ ಬರುತ್ತದೆ: ಮಾಜಿ ಸಚಿವ ಹೆಚ್​ಡಿ ರೇವಣ್ಣ | Some officers will soon be in jail says Former Minister HD Ravenna


ಕೆಲ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಸದ್ಯದಲ್ಲೇ ಬರುತ್ತದೆ: ಮಾಜಿ ಸಚಿವ ಹೆಚ್​ಡಿ ರೇವಣ್ಣ

ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ

ಹಾಸನ: ನೀರಾವರಿ ಇಲಾಖೆಯಲ್ಲಿ (Irrigation Department) ಹಣ ಇಲ್ಲವೆಂದು ಹೇಳುತ್ತಾರೆ. ಮತ್ತೊಂದೆಡೆ ಕೆಲವರಿಗೆ 200 ರಿಂದ 300 ಕೋಟಿ ರೂಪಾಯಿ ಕೊಡುತ್ತಾರೆ. ಎಲ್ಲಾ ಬೆಳವಣಿಗೆಗಳನ್ನು ನಾನು ಕೂಡ ನೋಡುತ್ತಿದ್ದೇನೆ. ಕೆಲ ಅಧಿಕಾರಿಗಳು ಜೈಲಿಗೆ (Jail) ಹೋಗುವ ಕಾಲ ಬರುತ್ತದೆ. ಈ ಕುರಿತು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ (CN Ashwath Narayan) ಚರ್ಚೆಗೆ ಬರಲಿ. ಮಾಜಿ ಸಿಎಂ ಕುಮಾರಸ್ವಾಮಿ ಕಾಲದಲ್ಲಿ ನಾವೇನು ಮಾಡಿದ್ದೇವೆ, ಅವರೇನು ಮಾಡಿದ್ದಾರೆಂದು ಹೇಳಲಿ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಚಿವ ಅಶ್ವತ್ಥ್ ನಾರಾಯಣ ಅವರಿಗೆ ಸವಾಲ್ ಹಾಕಿದ್ದಾರೆ.

ಬಳಿಕ ಮಾತನಾಡಿದ ಅವರು, ಹಾಸನ- ಸರ್ಕಾರಿ ಶಾಲೆ ಬಲಗೊಳಿಸಲು ಆಗದಿದ್ದರೆ ಹೇಳಿಬಿಡಿ. ನಾವು ಸರ್ಕಾರಿ ಶಾಲೆಗಳನ್ನು ಖಾಸಗಿ ಅವರಿಗೆ ಧಾರೆ ಎಳಿತೀವಿ ಎಂದು ಹೇಳಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಬಳಿ ನಿನ್ನೆ ನಾನು ನನ್ನ ಸ್ವಂತ ಕೆಲಸಕ್ಕಾಗಿ ಏನೂ ಕೇಳಿಲ್ಲ. ಹಾಸನ ಜಿಲ್ಲೆಯ ಹತ್ತು ಕಾಲೇಜಿಗೆ ಪಿಜಿ ವಿಭಾಗ ಕೊಡಿ ಎಂದು ಹಿಂದೆಯೇ ತೀರ್ಮಾನ ಆಗಿತ್ತು. ಇದೇ ಆದಾರದ ಮೇಲೆ ಹೊಳೆನರಸೀಪುರದ ಕ್ಷೇತ್ರದ 2 ಕಾಲೇಜುಗಳಿಗೆ ಪಿಜಿ ಸೆಂಟರ್ ನೀಡಲು ಮನವಿ ಮಾಡಿದ್ದೇನೆ ಅಷ್ಟೇ. ಈ ಬಗ್ಗೆ ವಿವಿ, ಇಲಾಖೆಯ ಕಾರ್ಯದರ್ಶಿಯೂ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ನನ್ನ ಕ್ಷೇತ್ರದ 2 ಕಾಲೇಜಿಗೆ ಪಿಸಿ ಸೆಂಟರ್ ಕೇಳಿದ್ದೇನೆ. ರಾಜ್ಯ ಸರ್ಕಾರದ ಬಳಿ ನಾನು ಯಾವುದೇ ಅನುದಾನ ಕೇಳುತ್ತಿಲ್ಲ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾನೇ ಸಂಬಳ ಕೊಡುತ್ತೇನೆ ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಕುಳಿತು ಮಾತನಾಡೊಣ ಎಂದಿದಾರೆ ಸಿಎಂ ಬಸವರಾಜ ಬೊಮ್ಮಾಯಿ, ಮಾಡದಿದ್ದರೆ ಹೋಗಲಿ, ಇನ್ನೊಂದು ವರ್ಷ ಬಿದ್ದಿರುತ್ತ ಬಿದ್ದಿರಲಿ ಬಿಡಿ. ಇಲ್ಲಿವರೆಗೆ ನಾವು ತಾಳ್ಮೆಯಿಂದ ಕೇಳಿದ್ದೀವಿ. ದೇವೇಗೌಡರ ಜೊತೆಯೂ ದೀರ್ಘವಾಗಿ ಈ ಬಗ್ಗೆ ಮಾತಾಡಿದ್ದೇನೆ. ಹೌದು ಹೊಳೆನರಸೀಪುರದಲ್ಲಿ ಎಂಟು ಕಾಲೇಜು ಮಾಡಿದಿನಿ. ಹುಡುಗರು ಇದ್ದಾರೆ ಮಾಡಿದಿನಿ, ಅವೇನು ಖಾಲಿ ಇದಾವೇನ್ರಿ ಎಂದು ಒಂದು ಕ್ಷೇತ್ರದಲ್ಲಿ ಎಂಟು ಕಾಲೇಜಿವೆ ಎಂದಿದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರಿಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಟಾಂಗ್ ನೀಡಿದ್ದಾರೆ.

ನೀರಾವರಿ ಇಲಾಖೆಯಲ್ಲಿ ಬೋಗಸ್ ಬಿಲ್ ತಯಾರಿಸುತ್ತಾರೆ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ

ಎಲ್ಲಿ ಕೆಲಸ ಮಾಡಬೇಕೋ ಅದನ್ನು ಬಿಟ್ಟು ಬೇರೆಲ್ಲೋ ಮಾಡುತ್ತಾರೆ. ಹಾಸನ ನೀರಾವರಿ ಇಲಾಖೆಯಲ್ಲಿ ಇಬ್ಬರು ಇಂಜಿನಿಯರ್‌ಗಳಿದ್ದಾರೆ. ಇಂಜಿನಿಯರ್‌ಗಳೇ ಬಿಲ್‌ಗಳನ್ನು ಬರೆದುಕೊಳ್ಳುತ್ತಾರೆ. ಅಟೆಂಡರ್ ಕೆಲಸ ಬಿಟ್ಟು ಎಲ್ಲವನ್ನೂ ಅವರೇ ಮಾಡಿಬಿಡುತ್ತಾರೆ.ಆ ಮೂಲಕ ನೀರಾವರಿ ಇಲಾಖೆಯಲ್ಲಿ ಬೋಗಸ್ ಬಿಲ್ ತಯಾರಿಸುತ್ತಾರೆ ಎಂದು ಇಂಜಿನಿಯರ್‌ಗಳ ವಿರುದ್ಧ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಲೇವಡಿ ಮಾಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ: ಮಾಜಿ ಸಚಿವ ಹೆಚ್.ಡಿ.ರೇವಣ್ಣ

3 ಕಾಸು ಕೊಡದ ಸರ್ಕಾರದಿಂದ ಅನುದಾನ ತಂದು ಕೆಲಸ ಮಾಡಲಾಗಿದೆ. ಕೈಕಾಲು ಹಿಡಿದು ಅನುದಾನ ತಂದು ಕೆಲಸ ಮಾಡಿಸಿದ್ದೇವೆ. ಆದರೆ ಹೆಚ್ಚುವರಿ ಲೋಡ್ ತುಂಬಿಕೊಂಡು ವಾಹನ ಸಂಚಾರ ಮಾಡಲಾಗುತ್ತಿದೆ. ಡಿಸಿ, ಎಸ್​ಪಿ, ಆರ್​ಟಿಒ ಅಧಿಕಾರಿಗಳು ಇದನ್ನು ತಡೆಯಬೇಕು. ನೀವು ತಡೆಯುತ್ತೀರೋ ಅಥವಾ ನಾವು ತಡೆಯಬೇಕಾ ಹೇಳಿ. ಹಾಸನ ಜಿಲ್ಲೆಗೆ ನೆರೆ ಪರಿಹಾರಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಿದ್ದಾರೆ. ಇನ್ನೂ ಎಲ್ಲಾ ಕಡೆ ಬೀದಿನಾಯಿಗಳ ಕಾಟ ಜಾಸ್ತಿಯಾಗಿದೆ. ಬೀದಿನಾಯಿಗಳನ್ನು ಹಿಡಿದು ಕಾಡಿಗೆ ಬಿಡುವಂತೆ ಹಾಸನ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *