ಕೆಸರಿನಲ್ಲಿ ಈಜಾಡಿ ಪ್ರತಿಭಟಿಸಿದ ಸಾಮಾಜಿಕ ಕಾರ್ಯಕರ್ತ.. ತಕ್ಷಣವೇ ಆಯ್ತು ರಸ್ತೆ ದುರಸ್ತಿ

ಕೆಸರಿನಲ್ಲಿ ಈಜಾಡಿ ಪ್ರತಿಭಟಿಸಿದ ಸಾಮಾಜಿಕ ಕಾರ್ಯಕರ್ತ.. ತಕ್ಷಣವೇ ಆಯ್ತು ರಸ್ತೆ ದುರಸ್ತಿ

ಶಿವಮೊಗ್ಗ: ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಸಾಮಾಜಿಕ ಹೋರಾಟಗಾರರೊಬ್ಬರು ಕೆಸರಿನಲ್ಲಿ ಈಜಾಡಿ ಪ್ರತಿಭಟಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಅಂಚೆ ಕಚೇರಿ ಬಳಿ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಕೆಸರಿನಲ್ಲಿ ಈಜಾಡಿ ಪ್ರತಿಭಟಿಸಿದವರು.

ಸಾಗರ-ತೀರ್ಥಹಳ್ಳಿ ಸಂಪರ್ಕದ ರಾಜ್ಯ ಹೆದ್ದಾರಿಯ ಅವ್ಯವಸ್ಥೆ ಖಂಡಿಸಿ ಕೃಷ್ಣಪ್ಪ ಹೀಗೆ ವಿನೂತನವಾಗಿ ಪ್ರತಿಭಟನೆ ದಾಖಲಿಸಿದ್ದಾರೆ. ಮುಖ್ಯ ರಸ್ತೆಯಲ್ಲಿ ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಹೊಂಡದಲ್ಲಿ ನಿಂತು ಈಜು ಕೊಳದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಸಲ ಹೇಳಿದರೂ ಪ್ರಯೋಜನ ಆಗಿರಲಿಲ್ಲವಂತೆ. ಈ ಹಿನ್ನೆಲೆಯಲ್ಲಿ ಟಿ.ಆರ್.ಕೃಷ್ಣಪ್ಪ ಅರೆ ಬೆತ್ತಲೆಯಾಗಿ ಕಲುಷಿತ ನೀರಿನಲ್ಲಿ ಈಜಾಡುವ ಮೂಲಕ ಇಲಾಖೆಯ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

ಕಳೆದ ವರ್ಷ ಇದೇ ರೀತಿ ಮಳೆಗಾಲದಲ್ಲಿ ನೀರು ನಿಂತಾಗ ವೇಗವಾಗಿ ಚಲಿಸುವ ವಾಹನದಿಂದ ಕೆಸರು ಸಿಡಿದು ಶಾಲಾ-ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗಿ ಮುಚ್ಚಿದ್ದರು ಎನ್ನಲಾಗಿಗೊಂಡ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯವರು ತಕ್ಷಣ ಸ್ಪಂದಿಸಿ ರಸ್ತೆಗೆ ಜಲ್ಲಿ ಪುಡಿ ಹಾಕಿದ್ದಾರೆ.

ಆದರೆ ಈ ಸಲದ ಮಳೆಗಾಲದ ಆರಂಭದಲ್ಲೇ ಹೊಂಡ ಗುಂಡಿ ಬಿದ್ದು ರಸ್ತೆಯಲ್ಲಿ ಮಳೆಗಾಲದ ನೀರು ತುಂಬಿಕೊಂಡಿತ್ತು.. ದ್ವಿಚಕ್ರ ವಾಹನದಲ್ಲಿ ಬಂದ ದಂಪತಿ ಆಕಸ್ಮಿಕವಾಗಿ ಗುಂಡಿಗೆ ಜಾರಿ ಬಿದ್ದದ್ದನ್ನು ಸಾಮಾಜಿಕ ಕಾರ್ಯಕರ್ತ ಟಿ.ಆರ್.‌‌ ಕೃಷ್ಣಪ್ಪ ಗಮನಿಸಿದ್ದರಂತೆ.. ತಕ್ಷಣವೇ ಅಂಗಿ ಕಳಚಿ ಕಲುಷಿತ ನೀರಿನಲ್ಲಿ ಕೃಷ್ಣಪ್ಪ ಈಜಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತಕ್ಷಣ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

The post ಕೆಸರಿನಲ್ಲಿ ಈಜಾಡಿ ಪ್ರತಿಭಟಿಸಿದ ಸಾಮಾಜಿಕ ಕಾರ್ಯಕರ್ತ.. ತಕ್ಷಣವೇ ಆಯ್ತು ರಸ್ತೆ ದುರಸ್ತಿ appeared first on News First Kannada.

Source: newsfirstlive.com

Source link