ಚಾಮರಾಜನಗರ: ಕೆಸರಿನ ಹೊಂಡದಲ್ಲಿ ಸಿಲುಕಿದ ಮರಿಯಾನೆಯೊಂದು ಹೊರಬರಲಾಗದೇ ಒದ್ದಾಟ ನಡೆಸಿದ್ದು ನಂತರ ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನ ನಡೆದಿದೆ.

ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಘಟನೆ ನಡೆದಿದ್ದು ಮೊಳೆಯೂರು ವಲಯದ ಮೀನಕಟ್ಟೆ ಕೆರೆ ಅರಣ್ಯಪ್ರದೇಶದಲ್ಲಿ ಮರಿಯಾನೆ ಕೆಸರಿನಲ್ಲಿ ಸಿಲುಕಿಕೊಂಡು ಹೊರಬರಲಾಗದೇ ಒದ್ದಾಡುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ ಮರಿಯಾನೆಯ ರಕ್ಷಣೆ ಮಾಡಿದ್ದಾರೆ.

The post ಕೆಸರಿನಲ್ಲಿ ಸಿಲುಕಿ ಒದ್ದಾಡಿದ ಮರಿಯಾನೆ.. ಜೆಸಿಬಿ ಮೂಲಕ ರಕ್ಷಣೆ appeared first on News First Kannada.

Source: newsfirstlive.com

Source link