ಕೆ.ಎಲ್​​ ರಾಹುಲ್​​ ರೋಹಿತ್​​​, ವಿರಾಟ್​​ಗಿಂತಲೂ ಅತ್ಯುತ್ತಮ ಬ್ಯಾಟ್ಸ್​​ಮನ್​​; ಗೌತಮ್​​ ಗಂಭೀರ್​​

ನವದೆಹಲಿ: ಪಂಜಾಬ್​​ ಕಿಗ್ಸ್​ ನಾಯಕ ಕೆ.ಎಲ್​​ ರಾಹುಲ್​​​​ ಟೀಮ್​ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್​​ ಶರ್ಮಾಗಿಂತಲೂ ಉತ್ತಮ ಬ್ಯಾಟ್ಸ್​​​​ಮನ್​​​ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್​​ ಗಂಭೀರ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಮಾತಾಡಿರುವ ಗೌತಮ್ ಗಂಭೀರ್, ಕೆ.ಎಲ್. ರಾಹುಲ್ ಆಟದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿದ್ದಾರೆ.

ನೀವು ಉತ್ತಮ ಬ್ಯಾಟಿಂಗ್​ ಮಾಡುತ್ತೀರಿ. ಭವಿಷ್ಯದಲ್ಲೂ ಹೀಗೆ ಬ್ಯಾಟಿಂಗ್​​ ಮುಂದುವರಿಸಿ. ನಿಮ್ಮ ಬ್ಯಾಟಿಂಗ್​​ ರೋಹಿತ್​​​ ಮತ್ತು ವಿರಾಟ್​​ಗಿಂತಲೂ ಅತ್ಯುತ್ತಮವಾಗಿದೆ. ಈ ಇಬ್ಬರು ಆಟಗಾರರಿಗಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿದ್ದೀರಿ. ಎಲ್ಲರಿಗಿಂತಲೂ ಉತ್ತಮ ಶಾಟ್ಸ್​ ಹೊಡೆಯುತ್ತೀರಿ ಎಂದು ಕೆ.ಎಲ್​​ ರಾಹುಲ್​​ಗೆ ಗಂಭೀರ್​​​ ಹೇಳಿದ್ದಾರೆ.

ನಿಮ್ಮ ಆಟ ನೀವಾಡಿ. ನಿಮ್ಮ ಸಾಮರ್ಥ್ಯವನ್ನು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ತೋರಿಸಿ. ಜನ ರೋಹಿತ್​​​, ವಿರಾಟ್​​ ಕೊಹ್ಲಿ ಬಗ್ಗೆ ಮಾತಾಡುವಾಗ ನಿಮ್ಮ ಬಗ್ಗೆಯೂ ಮಾತಾಡುತ್ತಾರೆ. ಇಡೀ ಜಗತ್ತು ಗೌರವಿಸಲಿದೆ. ನಿಮ್ಮ ಸಾಮರ್ಥ್ಯ ಎಲ್ಲರಿಗಿಂತಲೂ ಹೆಚ್ಚಿದೆ ಎಂದಿದ್ದಾರೆ.

ಇದನ್ನೂ ಓದಿ: ಶ್ರೀಕರ್​ ಭರತ್​, ಮ್ಯಾಕ್ಸ್​ವೆಲ್ ಆರ್ಭಟಕ್ಕೆ ಮಂಕಾದ ಡೆಲ್ಲಿ: ಆರ್​ಸಿಬಿಗೆ 7 ವಿಕೆಟ್​ಗಳ ಜಯ

ಇತ್ತೀಚೆಗೆ ಚೆನ್ನೈ ವಿರುದ್ಧ ಪಂಜಾಬ್​ ಗೆಲುವು ಸಾಧಿಸಿತ್ತು. ಅಂದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಕೇವಲ 42 ಎಸೆತಗಳಿಗೆ 98 ರನ್ ಗಳಿಸಿ ಔಟ್ ಆಗದೆ ಉಳಿದಿದ್ದರು. ಈ ಸಂದರ್ಭದಲ್ಲಿ ರಾಹುಲ್​​ ಆಟವನ್ನು ಹಲವರು ಕೊಂಡಾಡಿದ್ದರು.

News First Live Kannada

Leave a comment

Your email address will not be published. Required fields are marked *