ಕೋಲಾರ: ಕೊರೊನಾದಿಂದ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ಹಲವು ರೈತರು ತಾವು ಬೆಳೆದ ಬೆಳೆಗೆ ಬೆಲೆ ಸಿಗದೇ ಕಣ್ಣೀರು ಹಾಕುವಂತಾಗಿದೆ.

15 ಕೆಜಿ ತೂಕದ ಟೊಮ್ಯಾಟೋ ಕ್ರೇಟ್ ಕೇವಲ 30 ರೂಪಾಯಿಗೆ ಮಾರಾಟವಾಗುತ್ತಿದ್ದು ಎಕರೆಗೆ ಮೂರು ಲಕ್ಷ ಖರ್ಚು ಮಾಡಿದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಬಳಿ ಇರುವ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಳೆಯನ್ನ ಕೇಳುವವರೇ ಇಲ್ಲದಂತಾಗಿದೆ. ಕೆ.ಜಿ ಟೊಮ್ಯಾಟೋಗೆ ಕೇವಲ 75 ಪೈಸೆ ಬೆಲೆ ಸಿಕ್ಕಿದ್ದಕ್ಕೆ ಮನನೊಂದು ರೈತನೋರ್ವ ಕಣ್ಣೀರು ಹಾಕುತ್ತಾ ತಾನು ಬೆಳೆದ ಬೆಳೆಯನ್ನ ರಸ್ತೆ ಬದಿಯಲ್ಲಿ ಸುರಿದು ಆಕ್ರೋಶ ಹೊರಹಾಕಿದ್ದಾರೆ.

ಮಾರುಕಟ್ಟೆಗೆ ಇಂದು ಒಟ್ಟು 30 ಸಾವಿರ ಟೊಮ್ಯಾಟೋ ಬಾಕ್ಸ್ ಗಳು ಬಂದಿತ್ತು. ಇದರಲ್ಲಿ 5 ಸಾವಿರ ಬಾಕ್ಸ್ ಗಳಿಗೆ 30 ರುಪಾಯಿಯಂತೆ ವ್ಯಾಪಾರವಾಗಿದ್ದರೆ.. ಇನ್ನುಳಿದ 25 ಸಾವಿರ ಟೊಮ್ಯಾಟೋ ಬಾಕ್ಸ್ ಗಳನ್ನು ಕೇವಲ 2 ರುಪಾಯಿಗೆ ಕೊಡುವಂತೆ ದಲ್ಲಾಳಿಗಳು ಕೇಳಿದ್ದಾರೆ. ಇದರಿಂದ ಮನನೊಂದ ರೈತ ಟೊಮ್ಯಾಟೋವನ್ನು ಮಣ್ಣುಪಾಲು ಮಾಡಿದ್ದಾರೆ.

The post ಕೆ.ಜಿ. ಟೊಮ್ಯಾಟೋವನ್ನ 75 ಪೈಸೆಗೆ ಕೇಳಿದ ದಲ್ಲಾಳಿಗಳು.. ಕಣ್ಣೀರು ಹಾಕುತ್ತಾ ರಸ್ತೆಗೆ ಸುರಿದ ರೈತ appeared first on News First Kannada.

Source: newsfirstlive.com

Source link