ಬೆಂಗಳೂರು: ಕೆಜಿ ಹಳ್ಳಿ & ಡಿಜೆ ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ನಡೆಸುತ್ತಿದ್ದ ಕೇಸ್​ನಲ್ಲಿ ಒಟ್ಟು 115 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಕೆಲ ಆರೋಪಿಗಳು ಉಗ್ರ ಸಂಘಟನೆ ಜೊತೆ ಲಿಂಕ್ ಆರೋಪದಲ್ಲಿ ಎನ್​ಐಎ ಕೇಸ್ ಮಾಡಿತ್ತು.. ಎನ್ಐಎ ಕೋರ್ಟ್ ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು.. ಆ ಆದೇಶ ರದ್ದು‌ಮಾಡಿ‌ ನ್ಯಾ. ಎಸ್‌ ವಿಶ್ವಜಿತ್‌ ಶೆಟ್ಟಿಯವರ ಏಕಸದಸ್ಯ ಪೀಠ ಜಾಮೀನು ನೀಡಿದೆ.
2020ರ ವರ್ಷ ಆಗಸ್ಟ್‌ನಲ್ಲಿ ಈ ಗಲಭೆ ಪ್ರಕರಣ ನಡೆದಿತ್ತು.. ಸದ್ಯ ಹೈಕೋರ್ಟ್ CRPC ಸೆಕ್ಷನ್‌ 167(2)ರ ಅಡಿ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ವಿರುದ್ದ UAPA 1967 ಕಾಯ್ದೆ ಸೆ. 43-ಡಿ(2)(ಬಿ)ರಡಿ ಕೇಸ್ ಆಗಿತ್ತು. ಅದರಂತೆ ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಎನ್ಐಎ ಕೋರಿತ್ತು. ಅದಕ್ಕೆ ಎನ್ಐಎ ಕೋರ್ಟ್ 2020 ನ.3 ರಂದು ಅವಕಾಶ ನೀಡಿತ್ತು. ಆ ಆದೇಶವನ್ನ ಈಗ ಹೈಕೋರ್ಟ್ ರದ್ದು ಮಾಡಿ ಆದೇಶ ಮಾಡಿದೆ.

ಜಾಮೀನಿಗೆ ಷರತ್ತುಗಳು:

  • ಇಬ್ಬರ ಶ್ಯೂರಿಟಿ ಮತ್ತು ₹2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌
  • ಸಾಕ್ಷಿ ನಾಶಕ್ಕೆ ಯತ್ನಿಸಬಾರದು
  • ತನಿಖೆಗೆ ಸಹಕರಿಸಬೇಕು
  • ದೇಶ ಬಿಟ್ಟು ಹೋಗದಂತೆ ಸೂಚನೆ

The post ಕೆ.ಜಿ. ಹಳ್ಳಿ& ಡಿ.ಜೆ. ಹಳ್ಳಿ ಪ್ರಕರಣ: 115 ಆರೋಪಿಗಳಿಗೆ ಜಾಮೀನು ನೀಡಿದ ಹೈಕೋರ್ಟ್ appeared first on News First Kannada.

Source: newsfirstlive.com

Source link