ಇತ್ತೀಚೆಗಿನ ದಿನಗಳಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್, ಸೋಶಿಯಲ್ ಮೀಡಿಯಾಗಳಲ್ಲಿ ಮಾಡುತ್ತಿರುವ ಕಮೆಂಟ್ಗಳು ಭಾರೀ ಚರ್ಚೆಗೆ ಗ್ರಾಸವಾಗ್ತಿವೆ. ಮೊನ್ನೆ ಮೊನ್ನೆಯಷ್ಟೇ ಗಾಂಧೀಜಿ ಅವರ ‘ಅಹಿಂಸಾ ಮಾರ್ಗ’ ಹಾಗೂ ‘ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಗೆ’ಯ ಬಗ್ಗೆ ಟೀಕಿಸಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ, ಇಂದು ಕೃಷಿ ಕಾಯ್ದೆ ವಾಪಸ್ ಪಡೆದುಕೊಂಡಿದ್ಕೆ ಕೆಂಡಾಮಂಡಲರಾಗಿದ್ದಾರೆ.
ಇಂದು ಬೆಳಗ್ಗ ದೇಶವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ವಿವಾದಿತ ಮೂರು ಕೃಷಿ ಕಾಯ್ದೆಯನ್ನ ವಾಪಸ್ ಪಡೆಯುತ್ತಿದ್ದೇವೆ ಎಂದು ಘೋಷಣೆ ಮಾಡಿದರು. ಈ ಬೆನ್ನಲ್ಲೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅನಿಸಿಕೆಯನ್ನ ಶೇರ್ ಮಾಡಿರುವ ಕಂಗನಾ.. ಇದೊಂದು ನಾಚಿಕೆಗೇಡಿನ ಸಂಗತಿ ಮತ್ತು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದ್ದಾರೆ.
ತಮ್ಮ ವಿವಾದಾತ್ಮಕ ಟ್ವೀಟ್ ಹಾಗೂ ಹೇಳಿಕೆಗಳಿಂದಾಗಿಯೇ ಅವರ ಟ್ವಿಟರ್ ಅನ್ನ ಅಮಾನತಿನಲ್ಲಿ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ಸ್ಟಾ ಸ್ಟೋರಿಯಲ್ಲಿ ಅವರು ಬರೆದುಕೊಂಡಿರುವ ಅವರು.. ಇದೊಂದು ನಾಚಿಕೆಗೇಡಿನ ಸಂಗತಿ ಮತ್ತು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಆಕಾಂಕ್ಷಾ ಶ್ಯಾಂಡಿಲ್ಯಾ ಅನ್ನೋರ ಸಂಸತ್ತಿನಲ್ಲಿ ಚುನಾಯಿತ ಸರ್ಕಾರದ ಬದಲಿಗೆ ಬೀದಿಯಲ್ಲಿರುವ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ, ಅದು ಜಿಹಾದಿ ರಾಷ್ಟ್ರ ಅನ್ನೋ ಸ್ಟೇಟಸ್ಗೆ ಈ ರೀತಿ ಕಂಗನಾ ಕಮೆಂಟ್ ಮಾಡಿದ್ದಾರೆ.