ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಪ್ರಾಣವಾಯು ಆಕ್ಸಿಜನ್​​​​ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಲಾ 20 ಟನ್ ಸಾಮರ್ಥ್ಯದ 2 ಲಿಕ್ವಿಡ್ ಆಕ್ಸಿಜನ್ ಕಂಟೇನರ್​ಗಳನ್ನ ರಾಜ್ಯಕ್ಕೆ ಕಳುಹಿಸಿದೆ. ನಿನ್ನೆ ಕಂಟೇನರ್​ಗಳು ಮಂಗಳೂರಿಗೆ ಬಂದಿಳಿದಿವೆ.

ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ 2 ಕೇಂದ್ರ ಸರ್ಕಾರ ತಲಾ 20 ಟನ್ ಸಾಮರ್ಥ್ಯದ 2 ದ್ರವ ವೈದ್ಯಕೀಯ ಆಕ್ಸಿಜನ್ ಕಂಟೇನರ್ ಗಳನ್ನು ಬಹ್ರೇನ್‌ನಿಂದ ರಾಜ್ಯಕ್ಕೆ ಕಳುಹಿಸಿದೆ. ಜೊತೆಗೆ 2 ಹೆಚ್ಚುವರಿ ಕಂಟೇನರ್‌ಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮೂಲಕ ಕಳುಹಿಸಲು ಒಪ್ಪಿದೆ ಅಂತಾ ತಿಳಿಸಿದ್ದಾರೆ.

ರಾಜ್ಯಕ್ಕೆ ದ್ರವ ಆಕ್ಸಿಜನ್ ತರಲು ರಾಜ್ಯಸರ್ಕಾರ 5 ಟ್ಯಾಂಕರ್‌ಗಳನ್ನು ವಾಯುಪಡೆ ವಿಮಾನಗಳ ಮೂಲಕ ಒರಿಸ್ಸಾಗೆ ಕಳುಹಿಸಿದ್ದು, ಸುಮಾರು 74 ಮೆಟ್ರಿಕ್ ಟನ್ ಆಕ್ಸಿಜನ್ 2-3 ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ. ಸಾಂಕ್ರಾಮಿಕ ನಿರ್ವಹಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಅಂತಾ ಟ್ವೀಟ್ ಮಾಡಿದ್ದಾರೆ.

The post ಕೇಂದ್ರದಿಂದ ರಾಜ್ಯಕ್ಕೆ ಆಕ್ಸಿಜನ್ ನೆರವು: ಬಹ್ರೇನ್​ನಿಂದ​ ಬಂದ 2 ಕಂಟೇನರ್ appeared first on News First Kannada.

Source: newsfirstlive.com

Source link