ನವದೆಹಲಿ: ರೈತರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯೊಂದಿದೆ. ಸಂಪುಟ ವಿಸ್ತರಣೆ ಬೆನ್ನಲ್ಲೇ ಕೇಂದ್ರ ರೈತರಿಗೆ 1 ಲಕ್ಷ ಕೋಟಿ ರೂಪಾಯಿ ಘೋಷಿಸಿದೆ. ಕೇಂದ್ರದ ನೂತನ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ಇಂದು ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸಲು ಪ್ರಯತ್ನ ಮಾಡಲಾಗುವುದು. ಆತ್ಮನಿರ್ಭರ್‌ ಅಡಿ 1 ಲಕ್ಷ ಕೋಟಿ ಎಪಿಎಂಸಿಗೆ ಬಳಕೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದರು.

ಕೊರೊನಾ ತುರ್ತು ನಿರ್ವಹಣೆಗೆ 23,123 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು. ಶೀಘ್ರವೇ ತೆಂಗು ಮಂಡಳಿ ಕಾಯ್ದೆ ತಿದ್ದುಪಡಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ 20 ಸಾವಿರ ಹೊಸ ಐಸಿಯು ಬೆಡ್‌ ತಯಾರಿಗೆ ಚಿಂತಿಸಲಾಗಿದೆ. 2 ಲಕ್ಷ 44 ಸಾವಿರ ಹೊಸ ಆಕ್ಸಿಜನ್‌ ಬೆಡ್‌ಗಳ ತಯಾರಿ ಮಾಡಲಾಗುತ್ತಿದೆ. ರಾಜ್ಯಗಳಿಗೆ 15 ಸಾವಿರ ಕೋಟಿ ತುರ್ತು ಕೋವಿಡ್​​ ಫಂಡ್ ರಿಲೀಸ್​ ಮಾಡಲಾಗುವುದು ಎಂದರು.

The post ಕೇಂದ್ರದಿಂದ ರೈತರಿಗೆ ಬಂಪರ್​​ ಗಿಫ್ಟ್​; 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ appeared first on News First Kannada.

Source: newsfirstlive.com

Source link