ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಜಮ್ಮು ಕಾಶ್ಮೀರದ ರಾಜಕೀಯ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಗೃಹಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಭವಿಷ್ಯದ ಬಗ್ಗೆ ಚರ್ಚೆಗಳನ್ನು ನಡೆಸಿದ್ರು.

ಸಭೆಯಲ್ಲಿ ಜಮ್ಮು ಕಾಶ್ಮೀರದ ನಾಯಕರು ಮತ್ತು ಪ್ರಧಾನಿ ನಡುವೆ ಮುಕ್ತ ಮಾತುಕತೆ ನಡೆದಿದ್ದು ಹಲವು ಧನಾತ್ಮಕ ನಿರ್ಧಾರಗಳಿಗೆ ಮುನ್ನುಡಿ ಬರೆದಂತಾಗಿದೆ. ಪ್ರಮುಖವಾಗಿ ಜಮ್ಮು ಕಾಶ್ಮೀರಗಳಿಗೆ ರಾಜ್ಯತ್ವ ನೀಡುವುದು.. ಸುರಕ್ಷಿತ, ಭದ್ರತೆಯ ವಾತಾವರಣ ನಿರ್ಮಿಸುವುದು.. ಚುನಾವಣೆಗಳನ್ನ ನಡೆಸುವುದು.. ಆರ್ಟಿಕಲ್ 370 ಹೀಗೆ ಹಲವು ವಿಚಾರಗಳನ್ನ ಪ್ರಸ್ತಾಪಿಸಿ ಚರ್ಚೆ ನಡೆಸಲಾಯ್ತು.

ಈ ಬೆಳವಣಿಗೆಯ ಬಗ್ಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು.. ಜಮ್ಮು ಕಾಶ್ಮೀರದ ನಾಯಕರು ಹಾಗೂ ಒಕ್ಕೂಟ ಸರ್ಕಾರದ ನಡುವಿನ ಮಾತುಕತೆ ಚೆನ್ನಾಗಿಯೇ ನಡೆದಿದೆ ಎಂಬುದನ್ನ ಕೇಳಿ ಖುಷಿಯಾಯಿತು. ಅಲ್ಲದೇ ರಾಜ್ಯತ್ವ ನೀಡುವ ಬಗ್ಗೆ, ಅಸೆಂಬ್ಲಿ ಚುನಾವಣೆ ಬಗ್ಗೆ, ಹಾಗೂ ಮರುಸ್ಥಾಪನೆ ಬಗ್ಗೆಯೂ ಮುಕ್ತ ಮಾತುಕತೆಗಳು ನಡೆದಿವೆ. ಜಮ್ಮು ಕಾಶ್ಮೀರದ ಜನರು ಶಾಂತಿ, ಏಳಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಅರ್ಹರು ಎಂದು ಹೇಳಿದ್ದಾರೆ.

The post ಕೇಂದ್ರದೊಂದಿಗೆ ಕಣಿವೆ ನಾಡಿನ ನಾಯಕರ ಸಭೆ: ಮಹತ್ವದ ಬೆಳವಣಿಗೆ ಬಗ್ಗೆ ದೇವೇಗೌಡರು ಹೇಳಿದ್ದೇನು..? appeared first on News First Kannada.

Source: newsfirstlive.com

Source link