ಬಿಬಿಎಂಪಿ (ಪ್ರಾತತಿನಿಧಿಕ ಚಿತ್ರ)
ಬೆಂಗಳೂರು: ಕೇಂದ್ರದ ಸ್ವಚ್ಛ, ಕಸ ಮುಕ್ತ ಪ್ರಶಸ್ತಿಗೆ ಬೆಂಗಳೂರು ಆಯ್ಕೆಯಾಗಿದೆ. ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್ ಮತ್ತು ಕಸ ಮುಕ್ತ ನಗರಗಳ ಅಡಿಯಲ್ಲಿ ಅರ್ಜಿಗಳನ್ನು ಈ ಹಿಂದೆ ಆಹ್ವಾನಿಸಿತ್ತು. ಆ ಪ್ರಕಾರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಸರ್ವೇಕ್ಷಣಾ 2021 ಪ್ರಶಸ್ತಿ ನೀಡುತ್ತಿದ್ದು, ಇದರಲ್ಲಿ ಬೆಂಗಳೂರು ಆಯ್ಕೆಯಾಗಿದೆ. ಈ ಪ್ರಶಸ್ತಿಗೆ ರಾಜ್ಯದ ಒಟ್ಟು 9 ನಗರಗಳು ಸ್ವಚ್ಛ ನಗರಗಳೆಂದು (Clean city) ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಪ್ರಶಸ್ತಿಯನ್ನು ನೀಡಲಿದ್ದಾರೆ. ಬಿಬಿಎಂಪಿ (BBMP) ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಕೆಲ ಅಧಿಕಾರಿಗಳು ಸ್ವಚ್ಛ ಸರ್ವೇಕ್ಷಣಾ 2021 ಪ್ರಶಸ್ತಿ ಪಡೆಯಲಿದ್ದಾರೆ.
ರಾಜ್ಯಕ್ಕೆ ಒಟ್ಟು 9 ಪ್ರಶಸ್ತಿಗಳು
1) ಕರ್ನಾಟಕ ರಾಜ್ಯ
2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
3) ಹುಬ್ಬಳ್ಳಿ-ಧಾರವಾಡ
4) ಮೈಸೂರು
5) ಮುಧೋಳ
6) ಹೊಸದುರ್ಗ
7) ಕೃಷ್ಣರಾಜನಗರ
8) ಕುಮಟಾ
9) ಪಿರಿಯಾಪಟ್ಟಣ
ಇದನ್ನೂ ಓದಿ:
ಬಿ ಎಸ್ ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಣೆ; ಲೋಕಸಭಾ ಸ್ಪೀಕರ್ ಓಂ ಬಿರ್ಲಾರಿಂದ ಪ್ರಶಸ್ತಿ ಪ್ರದಾನ