ಕೇಂದ್ರ ಸಚಿವರ ಅಕೌಂಟ್​ ಲಾಕ್: ಫೇಸ್​​ಬುಕ್, ಟ್ವಿಟರ್​ಗೆ ಸಮನ್ಸ್ ಕಳಿಸಿದ ಶಶಿ ತರೂರ್ ಟೀಂ​

ಕೇಂದ್ರ ಸಚಿವರ ಅಕೌಂಟ್​ ಲಾಕ್: ಫೇಸ್​​ಬುಕ್, ಟ್ವಿಟರ್​ಗೆ ಸಮನ್ಸ್ ಕಳಿಸಿದ ಶಶಿ ತರೂರ್ ಟೀಂ​

ನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ನೇತೃತ್ವದ ಸಂಸತ್ತಿನ ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿ, ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಸುದ್ದಿಯನ್ನ, ಮಾಧ್ಯಮ ವೇದಿಕೆಗಳಿಂದ ಆಗುತ್ತಿರೋ ದುರುಪಯೋಗವನ್ನು ಹೇಗೆ ತಡೆಗಟ್ಟೋದು ಅನ್ನೋದರ ಬಗ್ಗೆ ಕುರಿತು ಫೇಸ್‌ಬುಕ್ ಇಂಡಿಯಾ ಮತ್ತು ಗೂಗಲ್ ಇಂಡಿಯಾದ ಅಭಿಪ್ರಾಯಗಳನ್ನು ಕೇಳಲು ಸಮನ್ಸ್ ಕಳಿಸಿದ್ದು.. ಮಂಗಳವಾರ ಅಂದ್ರೆ ನಾಳೆ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಭಾರತದ ಕಾನೂನೇ ಸುಪ್ರೀಂ.. ಟ್ವಿಟರ್​ಗೆ ಶಶಿ ತರೂರ್​​ ನೇತೃತ್ವದ ಪ್ಯಾನೆಲ್ ವಾರ್ನಿಂಗ್

ಮಂಗಳವಾರ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ದುರುಪಯೋಗ ಮತ್ತು ಟ್ವಿಟರ್‌ನೊಂದಿಗೆ ಸರ್ಕಾರದ ನಿರಂತರ ಜಗಳದ ಬಗ್ಗೆ ಸಮಿತಿ ತಿಳಿದುಕೊಳ್ಳುತ್ತದೆ. ಕಳೆದ ವಾರ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ತಮ್ಮ ಟ್ವಿಟ್ಟರ್ ಖಾತೆಗೆ ಸುಮಾರು ಒಂದು ಗಂಟೆ ಕಾಲ ಪ್ರವೇಶವನ್ನು ನಿರಾಕರಿಸಲಾಗಿತ್ತು. ಕಾಂಗ್ರೆಸ್ಸಿನ ಶಶಿ ತರೂರ್ ಅವರು ಕೃತಿಸ್ವಾಮ್ಯದ ವಿಷಯದಲ್ಲಿ ಅದೇ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಹೇಳಿದ್ದರು. ತಮ್ಮ ಮತ್ತು ರವಿಶಂಕರ್ ಪ್ರಸಾದ್ ಅವರ ಖಾತೆಯನ್ನು ಸಂಕ್ಷಿಪ್ತವಾಗಿ ಲಾಕ್ ಮಾಡುವ ಬಗ್ಗೆ ಟ್ವಿಟರ್ ಇಂಡಿಯಾದಿಂದ ವಿವರಣೆಯನ್ನು ಕೋರಲಿದ್ದೇನೆ ಅಂತ ತರೂರ್ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಕೇಂದ್ರವು ಹೊಸ ಐಟಿ ನಿಯಮಗಳನ್ನು “ತಕ್ಷಣ” ಅನುಸರಿಸಲು ಕೊನೆಯ ಅವಕಾಶವನ್ನು ನೀಡುವ ಮೂಲಕ ಟ್ವಿಟರ್‌ಗೆ ನೋಟಿಸ್ ನೀಡಲಾಗಿತ್ತು ಮತ್ತು ಮಾನದಂಡಗಳನ್ನು ಪಾಲಿಸಲು ವಿಫಲವಾದರೆ ವೇದಿಕೆಯು ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಅಂತ ಟ್ವಿಟರ್​ಗೆ​ ಎಚ್ಚರಿಸಲಾಗಿತ್ತು.

The post ಕೇಂದ್ರ ಸಚಿವರ ಅಕೌಂಟ್​ ಲಾಕ್: ಫೇಸ್​​ಬುಕ್, ಟ್ವಿಟರ್​ಗೆ ಸಮನ್ಸ್ ಕಳಿಸಿದ ಶಶಿ ತರೂರ್ ಟೀಂ​ appeared first on News First Kannada.

Source: newsfirstlive.com

Source link