ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಪೊಲೀಸ್ ವಶಕ್ಕೆ

ಲಖನೌ: ಅಕ್ಟೋಬರ್ 3 ರಂದು ನಡೆದ ಲಖೀಂಪುರ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನ ಉತ್ತರಪ್ರದೇಶದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಂದು ಎಸ್​ಐಟಿ ಆಶಿಶ್ ಮಿಶ್ರಾನನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಈ ಹಿನ್ನೆಲೆ ಇಂದು ಆಶಿಶ್ ಮಿಶ್ರಾ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಪೊಲೀಸರು ಆಶಿಶ್ ಮಿಶ್ರಾನನ್ನ ವಶಕ್ಕೆ ಪಡೆಯಲಾಗಿದೆ. ಸದ್ಯದಲ್ಲೇ ಆಶಿಶ್ ಮಿಶ್ರಾನ ಬಂಧನವೂ ಆಗಬಹುದು ಎನ್ನಲಾಗಿದೆ.

ಇದನ್ನೂ ಓದಿ: ಕೊನೆಗೂ ವಿಚಾರಣೆಗೆ ಹಾಜರಾದ ಆಶಿಶ್ ಮಿಶ್ರಾ; ‘ನನ್ನ ಮಗ ಮುಗ್ಧ’ ಅಂದ್ರು ಕೇಂದ್ರ ಸಚಿವ ಅಜಯ್ ಮಿಶ್ರಾ

ಘಟನೆಗೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ಘಟನೆಯ ದಿನ ನೀವು ಎಲ್ಲಿದ್ದಿರಿ..? ನಿಮ್ಮ ವಿರುದ್ಧ ಕೇಳಿಬಂದ ಆರೋಪಗಳು ನಿಜವೇ ಎಂದು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಇದೆ. ಸುಪ್ರೀಂಕೋರ್ಟ್ ಈ ವಿಚಾರವಾಗಿ ಸುವೋಮೋಟೋ ಕೇಸ್ ದಾಖಲಿಸಿಕೊಂಡು ಆಶಿಶ್ ಮಿಶ್ರಾನನ್ನು ಬಂಧಿಸದ ಹಿನ್ನೆಲೆ ಅಸಮಾಧಾನ ಹೊರಹಾಕಿತ್ತು. ಅಲ್ಲದೇ ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

News First Live Kannada

Leave a comment

Your email address will not be published. Required fields are marked *