ಮಧ್ಯಪ್ರದೇಶ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಗೆಹ್ಲೋಟ್ ಪುತ್ರಿ ಯೋಗಿತಾ ಸೋಲಂಕಿ ಕೊರೊನಾದಿಂದಾಗಿ ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಕೇಂದ್ರ ಸಚಿವರ ಕಚೇರಿಯಿಂದ ಮಾಹಿತಿ ಹೊರಬಿದ್ದಿದೆ.

ಎರಡು ವಾರಗಳ ಹಿಂದೆ ಯೋಗಿತಾ ಸೋಲಂಕಿ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು.. 44 ವರ್ಷದ ಯೋಗಿತಾ ಅವರ ಶ್ವಾಸಕೋಶಗಳ ಮೇಲೆ ಸೋಂಕು ತೀವ್ರ ಪರಿಣಾಮ ಬೀರಿತ್ತು ಎನ್ನಲಾಗಿದೆ. ಮೊದಲಿಗೆ ಉಜ್ಜೈನಿಯ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನ ನಂತರ ಇಂದೋರ್​​ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಇಂದು ಬೆಳಗ್ಗೆ ಯೋಗಿತಾ ಸೋಲಂಕಿಯವರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ ರಕ್ತ ಹೆಪ್ಪುಗಟ್ಟಿತ್ತು ಎನ್ನಲಾಗಿದೆ.

The post ಕೇಂದ್ರ ಸಚಿವ ಥಾವರ್ ಗೆಹ್ಲೋಟ್ ಪುತ್ರಿ ಕೊರೊನಾ ಸೋಂಕಿನಿಂದ ಸಾವು appeared first on News First Kannada.

Source: newsfirstlive.com

Source link