ಕೇಂದ್ರ ಸಚಿವ ಪಂಕಜ್ ಚೌಧರಿ ಪುತ್ರನ ಕಾರಿಗೆ ಭೀಕರ ಅಪಘಾತ..!


ಲಖನೌ: ಕೇಂದ್ರ ಸಚಿವ ಪಂಕಜ್ ಚೌಧರಿ ಪುತ್ರನಿದ್ದ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್​​ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ರೋಹನ್ ಚೌಧರಿ ಪ್ರಯಾಣಿಸುತ್ತಿದ್ದ ಕಾರು, ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಪರ್ತವಾಲ್-ಕಪ್ತಂಗಂಜ್ ರಸ್ತೆಯಲ್ಲಿ ಕಬ್ಬು ತುಂಬಿದ ಗಾಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೋಹನ್​​ಗೆ ಸ್ವಲ್ಪ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಆಗಿದ್ದಾರೆ.

ರೋಹನ್ ಚೌಧರಿ ರಾತ್ರಿ ಬಿಹಾರದಿಂದ ತಮ್ಮ ಖಾಸಗಿ ವಾಹನದಲ್ಲಿ ಮಹಾರಾಜ್‌ಗಂಜ್‌ನ ನಿವಾಸಕ್ಕೆ ಆಗಮಿಸುತ್ತಿದ್ದರು. ದಟ್ಟವಾದ ಮಂಜು ಆವರಿಸಿದ್ದರಿಂದ ರಸ್ತೆ ಸರಿಯಾಗಿ ಕಾಣದೆ, ಅಪಘಾತ ಸಂಭವಿಸಿದೆ ಅಂತ ಹೇಳಲಾಗುತ್ತಿದೆ.

News First Live Kannada


Leave a Reply

Your email address will not be published.