ಕೇಂದ್ರ ಸರ್ಕಾರ ಜನರಿಗೆ ‘ಸ್ಲೋ ಪಾಯ್ಸನ್’ ನೀಡುವಲ್ಲಿ ನಿರತವಾಗಿದೆ- ಕುಸುಮಾ ಹನುಮಂತರಾಯಪ್ಪ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಮತ್ತೊಮ್ಮೆ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ ಜನರಿಗೆ ಸ್ಲೋ ಪಾಯ್ಸನ್ ನೀಡುವಲ್ಲಿ ನಿರತವಾಗಿದೆ ಎಂದಿದ್ದಾರೆ.

ಅಗತ್ಯ ವಸ್ತುಗಳಾದ ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನ ಮೇಲಿಂದ ಮೇಲೆ ಏರಿಕೆ ಮಾಡಿ ಜನಸಾಮಾನ್ಯನ ಮೇಲೆ ಸವಾರಿ ಮಾಡುತ್ತ.. ಬೆಲೆ ಏರಿಕೆ ಎಂಬ ಸ್ಲೋ ಪಾಯ್ಸನ್ ನೀಡುವಲ್ಲಿ ನಿರತವಾಗಿರುವ ಕೇಂದ್ರ ಸರ್ಕಾರಕ್ಕೆ ಜನರ ಕಷ್ಟಗಳು ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದಿದ್ದಾರೆ.

ಇತ್ತೀಚೆಗೆ ಗ್ಯಾಸ್ ಬೆಲೆ ಮತ್ತೆ 15 ರೂ ಏರಿಕೆಯಾಗಿದ್ದು ಇದರಿಂದ ಮದ್ಯಮ ವರ್ಗದವರು ಬಡವರಾಗಿದ್ದಾರೆ. ಬಡವರು ಕಡುಬಡವರಾಗಿದ್ದಾರೆ. ಕಡುಬಡವರು ಸಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

News First Live Kannada

Leave a comment

Your email address will not be published. Required fields are marked *