ಕೇಂದ್ರ ಸರ್ಕಾರ ನೀಡುವ ಉತ್ಕೃಷ್ಟ ಸಾರ್ವಜನಿಕ ಆಡಳಿತ ಪ್ರಶಸ್ತಿಗೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್​ಗೆ ಪ್ರಶಸ್ತಿ | Karnataka Government’s Seva Sindhu Portal for Outstanding Public Administration Award from Central Government


ಕೇಂದ್ರ ಸರ್ಕಾರ ನೀಡುವ ಉತ್ಕೃಷ್ಟ ಸಾರ್ವಜನಿಕ ಆಡಳಿತ ಪ್ರಶಸ್ತಿಗೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್​ಗೆ ಪ್ರಶಸ್ತಿ

ಪ್ರಧಾನಿ ಮೋದಿಯವರಿಂದ ಸರ್ಕಾರದ ಪರವಾಗಿ ಪ್ರಶಸ್ತಿ ಪಡೆದ ಐಎಎಸ್‌ ಅಧಿಕಾರಿ ದೀಪ್ತಿ ಆದಿತ್ಯ ಕಾನಡೆ

ದೆಹಲಿ: ಇಂದು‌ ನಾಗರಿಕ ಸೇವಾ ದಿನ ಹಿನ್ನೆಲೆ ಕೇಂದ್ರ ಸರ್ಕಾರವು 2021ರ ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ನೀಡುವ ಪ್ರಶಸ್ತಿಗೆ ಕರ್ನಾಟಕ ಆಯ್ಕೆಯಾಗಿದೆ. ಅಡೆತಡೆಯಿಲ್ಲದ, ಮೊದಲಿನಿಂದ ಕೊನೆತನಕ ಮಾನವ ಮಧ್ಯಪ್ರವೇಶವಿಲ್ಲದ ಸೇವೆ ನೀಡಿಕೆ ವಿಭಾಗದ ಪ್ರಶಸ್ತಿಗೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ (Seva Sindhu Portal) ಪ್ರಶಸ್ತಿ ಆಯ್ಕೆಯಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಕರ್ನಾಟಕ ಸರ್ಕಾರದ ಪರವಾಗಿ ಐಎಎಸ್‌ ಅಧಿಕಾರಿ ದೀಪ್ತಿ ಆದಿತ್ಯ ಕಾನಡೆ ಪ್ರಶಸ್ತಿ ಸ್ವೀಕರಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ದಿನಾಚರಣೆ, ಸಿಎಂ ಬೊಮ್ಮಾಯಿಯವರಿಂದ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ

ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ಮಂದಿರದ ಆವರಣದಲ್ಲಿ ರಾಜ್ಯ ಸರಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಅಶ್ವಥ್ ನಾರಾಯಣ, ಸಚಿವ ಬೈರತಿ ಬಸವರಾಜ್, ಲಕ್ಷಣ ಸವದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದಾರೆ.

ರಾಜ್ಯ ಮಟ್ಟದ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಗೆ ಸರಕಾರಿ ನೌಕರರ ಸಂಘದಿಂದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಮಾತನಾಡಿದ್ದು, ಸರ್ಕಾರಿ ದಿನಾಚರಣೆ ಈ ವರ್ಷದಿಂದ ಆರಂಭ ಆಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ 10 ಜನರಿಗೆ ಸರ್ವೋತ್ತಮ ಪ್ರಶಸ್ತಿ ನೀಡಲಾಗುತ್ತಿದೆ. ತಲಾ 25 ಸಾವಿರ ರೂಪಾಯಿ ನಗದು ಪ್ರಶಸ್ತಿ ನೀಡಲಾಗುತ್ತಿದೆ. ಸಿಎಂ ಬೊಮ್ಮಾಯಿ ಅವರು ಕಡಿಮೆ ಅವಧಿಯಲ್ಲಿ ಸರಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಿದ್ದಾರೆ. ಸರಕಾರಿ ನೌಕರರು ಉತ್ತಮವಾಗಿ ಕೆಲಸ ನಿರ್ವಹಣೆ ಮೂಲಕ ಸರಕಾರಕ್ಕೆ ಹೆಸರು ತರಬೇಕೆಂದು ಕಿವಿಮಾತು ಹೇಳಿದ್ರು.

TV9 Kannada


Leave a Reply

Your email address will not be published.