ನವದೆಹಲಿ: ಜಮ್ಮು ಕಾಶ್ಮೀರದ ರಾಜಕೀಯ ನಾಯಕರ ಜೊತೆಗೆ ಇಂದು ಪ್ರಧಾನಿ ಮೋದಿ ಸರ್ವಪಕ್ಷ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ.. ಜಮ್ಮು ಕಾಶ್ಮೀರದ ರಾಜ್ಯತ್ವವನ್ನ ಮರುಸ್ಥಾಪಿಸಿ ಜನರ ನಂಬಿಕೆ ಗಳಿಸುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾಗಿ ಹೇಳಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಳೆದುಕೊಂಡಿರುವ ನಂಬಿಕೆಯನ್ನ ಮರಳಿ ಪಡೆಯಬೇಕಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವ ನೀಡುವ ಬಗ್ಗೆ ಕಾರ್ಯೋನ್ಮುಖವಾಗಬೇಕಿದೆ. ಜಮ್ಮು ಕಾಶ್ಮೀರದ ರಾಜ್ಯತ್ವವನ್ನ ಮರುಸ್ಥಾಪಿಸುವುದು ಎಂದರೆ ಅಲ್ಲಿನ ಐಎಎಸ್ ಮತ್ತು ಐಪಿಎಸ್​ ಕ್ಯಾಡ್ರೆಗಳನ್ನೂ ಹಿಂತಿರುಗಿಸಬೇಕು ಎಂದು ಪ್ರಧಾನಿ ಮೋದಿಗೆ ತಿಳಿಸಿದ್ದೇನೆ ಎಂದು ಫಾರೂಖ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಜಮ್ಮು&ಕಾಶ್ಮೀರ ನಾಯಕರೊಂದಿಗೆ ಸುದೀರ್ಘ ಮೂರೂವರೆ ಗಂಟೆ ಸಭೆ ನಡೆಸಿದ ಮೋದಿ: ಏನೆಲ್ಲಾ ಚರ್ಚೆಯಾಯ್ತು..?

The post ಕೇಂದ್ರ ಸರ್ಕಾರ ಮೊದಲು ಜಮ್ಮು&ಕಾಶ್ಮೀರದ ನಂಬಿಕೆ ಗಳಿಸಬೇಕು- ಫಾರೂಕ್ ಅಬ್ದುಲ್ಲಾ appeared first on News First Kannada.

Source: newsfirstlive.com

Source link