ಉಡುಪಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ.ಜಿ.ಭಾಸ್ಕರ್ ಮಯ್ಯ ಕೊರೊನಾಗೆ ಇಂದು ಬಲಿಯಾಗಲಿದ್ದಾರೆ.

ಡಾ.ಭಾಸ್ಕರ ಮಯ್ಯ(70) ಕಳೆದ 4 ದಿನಗಳಿಂದ ಸಾಲಿಗ್ರಾಮದ ಪ್ರಣವ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ. ಡಾ.ಜಿ.ಭಾಸ್ಕರ್ ಮಯ್ಯ ಇವರು ದೀರ್ಘಕಾಲ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದರು.

ವೈಚಾರಿಕ ಹಾಗೂ ಪ್ರಗತಿಪರ ಸಾಹಿತ್ಯದಲ್ಲಿ 50ಕ್ಕೂ ಹೆಚ್ಚು ಗ್ರಂಥ ರಚಿಸಿದ್ದ ಭಾಸ್ಕರ್ ಮಯ್ಯ ಅವರ ನಿಧನಕ್ಕೆ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ. ಎಡಚಿಂತಕರಾಗಿ ಕಮ್ಯೂನಿಸ್ಟರಾಗಿದ್ದ ಇವರು ಪಕ್ಷದ ಸದಸ್ಯರಿಗೆ ತರಗತಿ ನೀಡುತ್ತಿದ್ದರು. ಯುವಜನ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಡಾ.ಜಿ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರ್ಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.

The post ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಮಯ್ಯ ಕೊರೊನಾಗೆ ಬಲಿ appeared first on Public TV.

Source: publictv.in

Source link