ಕೇದಾರನಾಥಕ್ಕೆ ತೆರಳಲಿದೆ ಮೈಸೂರಿನಲ್ಲಿ ನಿರ್ಮಾಣವಾದ ಶಂಕರಾಚಾರ್ಯರ ಪ್ರತಿಮೆ.. ಏನಿದರ ವಿಶೇಷತೆ..?

ಕೇದಾರನಾಥಕ್ಕೆ ತೆರಳಲಿದೆ ಮೈಸೂರಿನಲ್ಲಿ ನಿರ್ಮಾಣವಾದ ಶಂಕರಾಚಾರ್ಯರ ಪ್ರತಿಮೆ.. ಏನಿದರ ವಿಶೇಷತೆ..?

12.5 ಅಡಿ ಎತ್ತರದ ಅದಿ ಶಂಕರಾಚಾರ್ಯರ ಬೃಹತ್​​ ಪ್ರತಿಮೆಯನ್ನು ತೀರ್ಥಕ್ಷೇತ್ರ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆಗಳು ನಡೆದಿದೆ. ವಿಶೇಷ ಎಂದರೇ ಮಹತ್ವದ ಯೋಜನೆಗೆ ಶಂಕರಾಚಾರ್ಯರ ಪತ್ರಿಮೆಯೂ ಮೈಸೂರಿನಲ್ಲಿ ಸಿದ್ಧಪಡಿಸಲಾಗಿದೆ. ನಾಳೆ ಅಂದರೆ ಜೂನ್ 18 ರಂದು ಪತ್ರಿಮೆಯನ್ನು ಕೇದಾರನಾಥಕ್ಕೆ ಕಳುಹಿಸುವ ಕಾರ್ಯ ಆರಂಭವಾಗಲಿದೆ.

ಇದು ಕೇಂದ್ರ ಸರ್ಕಾರ ಮಹತ್ವ ಯೋಜನೆಯಾಗಿದ್ದು, ಶಂಕರಾಚಾರ್ಯರು ತಮ್ಮ 32ಮೇ ವಯಸ್ಸಿಗೆ ಐಕ್ಯರಾದ ಕೇದಾರನಾಥದಲ್ಲಿ ಕೈಗೊಳ್ಳಲಾಗುತ್ತಿದೆ. ಇಲ್ಲಿ ಮೋದಿ ಅವರ ಆಶಯದಂತೆ ಶ್ರೀ ಶಂಕರಾಚಾರ್ಯರ ಅಧ್ಯಯನಪೀಠ ಹಾಗೂ ಮ್ಯೂಸಿಯಂ ಸ್ಥಾಪನೆ ಮಾಡಲಾಗುತ್ತಿದೆ.

ಮೈಸೂರಿನ ಶಿಲ್ಪಿ ಅರುಣ್​​ ಯೋಗಿರಾಜ್​ ಅವರು ಪತ್ರಿಮೆಯನ್ನು ಸಿದ್ಧಪಡಿಸಿದ್ದಾರೆ. ಪ್ರಧಾನಮಂತ್ರಿಗಳ ಕಚೇರಿಯಿಂದ ಅರುಣ್ ಅವರಿಗೆ ನೇರವಾಗಿ ಕಾಂಟ್ರ್ಯಾಕ್ಟ್​​ ನೀಡಲಾಗಿತ್ತು. ಈ ಕುರಿತು ಮಾತನಾಡಿರುವ ಅರುಣ್ ಅವರು, ಶಂಕರಾಚಾರ್ಯರದ ಪ್ರತಿಮೆಯನ್ನು ಸಿದ್ಧಪಡಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಯೋಜನೆಗೆ ದೇಶದ ವಿವಿಧ ಶಿಲ್ಪಿಗಳಿಂದ ಮಾದರಿ ಪ್ರತಿಮೆಯನ್ನು ನಿರ್ಮಿಸಿ ಬಳಿಕ ಅದರಲ್ಲಿ ತಮ್ಮನ್ನು ಆಯ್ಕೆ ಮಾಡಲಾಗಿತ್ತು. ಪ್ರತಿಮೆಯನ್ನು ಕೆತ್ತನೆ ಮಾಡಲು Chlorite Schist stone (ಕಪ್ಪುಶಿಲೆ)ಯನ್ನು ಬಳಸಿಕೊಳ್ಳಲಾಗಿದೆ. ಇಂತಹ ಶಿಲೆಗಳನ್ನು ಬಳಸಿ ಬೇಲೂರು ಮತ್ತು ಹಳೆಬೀಡು ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಶಿಲೆ ಬೆಂಕಿ, ಬಿಸಿಲು, ಗಾಳಿ ಮತ್ತು ಮಳೆಯನ್ನು ಎದುರಿಸಿ ನಿಲ್ಲತ್ತದೆ ಎಂದು ಹೇಳಿದ್ದಾರೆ.

ಅಂದಹಾಗೆ, ಅರುಣ್ ಅವರ ತಂದೆಯಿಂದಲೇ ವಂಶಪಾರಂಪರ್ಯವಾಗಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬದಲ್ಲಿ ಐದನೇ ತಲೆಮಾರಿನ ಶಿಲ್ಪಿಯಾಗಿದ್ದಾರೆ. ಪ್ರತಿಮೆಯನ್ನು ರಚನೆ ಮಾಡಲು 120 ಟನ್​​​ ತೂಕ ಕೃಷ್ಣಶಿಲೆಯನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಪ್ರತಿಮೆ ಸಿದ್ಧವಾದ ಬಳಿಕ 35 ಟನ್​ ತೂಕವನ್ನು ಹೊಂದಿದೆ. 2020ರ ಸೆಕ್ಟೆಂಬರ್​​ನಿಂದ ಅರುಣ್ ಅವರು ಪ್ರತಿಮೆಯನ್ನು ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

2013ರಲ್ಲಿ ಉಂಟಾಗಿದ್ದ ಪ್ರವಾಹದ ಸಂದರ್ಭದಲ್ಲಿ ಶಂಕರಾಚಾರ್ಯರ ಸಮಾಧಿ ನಾಶವಾಗಿತ್ತು. ಆ ಬಳಿಕ ಜೆಎಸ್​​ಡಬ್ಲ್ಯೂ ಗ್ರೂಪ್​ ಪ್ರದೇಶವನ್ನು ದತ್ತು ಪಡೆದು ರಕ್ಷಣೆ ಮಾಡುವ ಕಾರ್ಯವನ್ನು ಮಾಡಿತ್ತು. ಶಂಕರಾಚಾರ್ಯರು ಕುಳಿತು ಕೊಂಡಿರುವ ಭಂಗಿಯಲ್ಲಿರುವ ಪ್ರತಿಮೆಯನ್ನು ಅವರ ಸಮಾಧಿಯ ಬಳಿ ಪ್ರತಿಷ್ಠಾಪಿಸಲಾಗುತ್ತದೆ.

The post ಕೇದಾರನಾಥಕ್ಕೆ ತೆರಳಲಿದೆ ಮೈಸೂರಿನಲ್ಲಿ ನಿರ್ಮಾಣವಾದ ಶಂಕರಾಚಾರ್ಯರ ಪ್ರತಿಮೆ.. ಏನಿದರ ವಿಶೇಷತೆ..? appeared first on News First Kannada.

Source: newsfirstlive.com

Source link